ಜಿಲ್ಲೆ

ಕಿಕ್​ ಬಾಕ್ಸಿಂಗ್​ನಲ್ಲಿ ಚಿನ್ನದ ಪದಕ

ವಿಜಯಪುರ : ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಶ್ಮಿತಾ ಖೇಲೋ ಇಂಡಿಯಾ ಕಿಕ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಇಲ್ಲಿನ ಎಬಿವಿ (ಸಿಬಿಎಸ್​ಇ) ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.

ವಿದ್ಯಾರ್ಥಿನಿಯರಾದ ದಿವ್ಯ ಚನ್ನಶೆಟ್ಟಿ, ಮುದ್ರಾ ಬಾಗಲಕೋಟೆ, ಆರಾಧ್ಯ ಕಲ್ಯಾಣಿ, ಆದ್ಯಾ ಸೋನಾರ ಹಾಗೂ ಖುಷಿ ತಂಬಾಕೆ ಕಿಕ್​ ಬಾಕ್ಸಿಂಗ್​ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಉಪಾಧ್ಯ ಸಂಗನಬಸಪ್ಪ ಸಜ್ಜನ, ಚೇರ್ಮನ್​ ಬಸಯ್ಯ ಹಿರೇಮಠ, ಶಾಲಾ ನಾಮ ನಿರ್ದೇಶಿತ ಅಧ್ಯ ಬಸವರಾಜ ಸುಗೂರ, ಹಣಕಾಸು ಕಾರ್ಯದರ್ಶಿ ಸದಾನಂದ ದೇಸಾಯಿ, ಜಂಟಿ ಕಾರ್ಯದರ್ಶಿ ಎಂ.ಎಂ. ಸಜ್ಜನ, ಕೋಶಾಧಿಕಾರಿ ಶಿವಾನಂದ ನೀಲಾ, ಶಾಲಾ ಆಡಳಿತಾಧಿಕಾರಿ ಡಾ. ಎಚ್​. ವೆಂಕಟೇಶ, ಮುಖ್ಯ ಗುರುಮಾತೆ ಐಶ್ವರ್ಯ ಸಂಗಮ, ದೈಹಿಕ ಶಿಕಿ ಅನೀತಾ ಡೋಕಳೆ, ತರಬೇತುದಾರ ಪ್ರವಿಣಕುಮಾರ ವಠಾರ ಅಭಿನಂದಿಸಿದ್ದಾರೆ.

ಅಶ್ಮಿತಾ ಖೇಲೋ ಇಂಡಿಯಾ ಕಿಕ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಸಾಧನೆಗೈದ ವಿಜಯಪುರದ ಎಬಿವಿ (ಸಿಬಿಎಸ್​ಇ) ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಾಲಾ ಸಿಬ್ಬಂದಿಗಳಿದ್ದಾರೆ.