ಜಿಲ್ಲೆ

ಯೋಗದೀಪಿಕಾ ಗುರುಕುಲದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಪಡುಬಿದ್ರಿ: ಕರ್ನಾಟಕ ರಾಜ್ಯ ಹಿಂದು ಧಾರ್ಮಿಕ ಸಂಸ್ಥೆ, ಧರ್ಮಾದಾಯ ದತ್ತಿಗಳ ಇಲಾಖೆ, ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ ವತಿಯಿಂದ ಜು.19ರಂದು ಬೆಂಗಳೂರು ಬಸವನಗುಡಿಯ ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದ ಶ್ರೀ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ಆಗಮ ಘಟಿಕೋತ್ಸವ-2025 ನಡೆಯಿತು.

ಶ್ರೀ ಪಲಿಮಾರು ಮೂಲ ಮಠ ಪಲಿಮಾರಿನ ಯೋಗದೀಪಿಕಾ ಗುರುಕುಲದ ತಂತ್ರಾಗಮ ವಿದ್ಯಾರ್ಥಿಗಳಾದ ವಿ.ಸುಪ್ರಸನ್ನ ಭಟ್(ಪ್ರವರ, ಪ್ರವೀಣ), ಮೇಲುಮಠ, ಕಬ್ಬಿನಾಲೆ ಎರಡು ಚಿನ್ನದ ಪದಕ, ವಿ.ಉಡುಪಿ ಲಕ್ಷ್ಮೀಶ ಭಟ್(ಪ್ರವೀಣ), ವಿ.ಮುಟ್ಲುಪಾಡಿ ವಿ.ಕಾರ್ತಿಕ್ ಭಟ್(ಪ್ರವೀಣ) ತಲಾ ಒಂದು ಚಿನ್ನದ ಪದಕಗಳೊಂದಿಗೆ ಪ್ರಮಾಣಪತ್ರ ಗಳಿಸಿದ್ದಾರೆ.