ಜಿಲ್ಲೆ

ಸ್ಕೇಟಿಂಗ್​ನಲ್ಲಿ ಏಕಾಂಶ್ ಕುಮಾರ್​ಗೆ ಚಿನ್ನದ ಪದಕ

ಬೆಂಗಳೂರು: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಹಕಾರದೊಂದಿಗೆ ಇಂಡಿಯಾ ಸ್ಕೇಟ್ ಮೈಸೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 3 ದಿನಗಳ ರಾಜ್ಯ ಮಟ್ಟದ 3ನೇ ಕರ್ನಾಟಕ ರಾಜ್ಯ ರ್ಯಾಂಕಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯ 17 ವರ್ಷ ವಯೋಮಿತಿ ವಿಭಾಗದಲ್ಲಿ ಎನ್.ಏಕಾಂಶ್ ಕುಮಾರ್ ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ.

ಎನ್.ಏಕಾಂಶ್ ಹೊಸಕೆರೆಹಳ್ಳಿ ನಿವಾಸಿ ನವೀನ್ ​ಕುಮಾರ್​ ಮತ್ತು ಟಿ.ಆರ್​.ಸೌಮ್ಯ ಪುತ್ರ. ಜಯನಗರದ ದಿ ನ್ಯಾಷನಲ್​ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

ಚನ್ನಮ್ಮನ ಕೆರೆಯಲ್ಲಿರುವ ಇಂದುಧರ್​ ಮತ್ತು ಆಶಾ ನಡೆಸುತ್ತಿರುವ ಫೋರ್ಸ್-1 ಸ್ಕೇಟಿಂಗ್​ ಕ್ಲಬ್​ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತ ಪ್ರತಿಕ್​ ರಾಜ್​ ಬಳಿ ತರಬೇತಿ ಪಡೆಯುತ್ತಿದ್ದಾರೆ. ಎನ್​.ಏಕಾಂಶ ಸಾಧನೆಗೆ ಪಾಲಕರು, ಶಿಕ್ಷಕರು, ಮಾರ್ಗದರ್ಶಕರು ಸಂತಸ ವ್ಯಕ್ತಪಡಿಸಿದ್ದಾರೆ.