ವಿಜಯವಾಣಿ ಸುದ್ದಿಜಾಲ ಧಾರವಾಡ
ತಮಿಳುನಾಡು ಅಮೆಚೂರ್ ರೆಸ್ಲಿಂಗ್ ಅಸೋಸಿಯೇಷನ್‌ನಿಂದ ಸೇಲಂನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 12ನೇ ದಕ್ಷಿಣ ಭಾರತ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರೀಕೋ ರೋಮನ್ ವಿಭಾಗದಲ್ಲಿ ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಅಶೋಕ ಹನುಮಂತಪ್ಪ ಮಾಕಣ್ಣವರ 87 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಸಾಧಕ ಕುಸ್ತಿಪಟುವನ್ನು ಗ್ರಾಮಸ್ಥರು ಮತ್ತು ಗ್ರಾಮದ ಗರಡಿ ಮನೆ ಗೆಳೆಯರ ಬಳಗ ಅಭಿನಂದಿಸಿದೆ.