ಶಿರಸಿ: ಇಲ್ಲಿನ ಟಿ.ಎಸ್.ಎಸ್. ಗ್ರೀನ್ ಗೋಲ್ಡ್ ಗೊಬ್ಬರ, ಚಿನ್ನ ಹಾಗೂ ಧಾರಾ ಪಶು ಆಹಾರ ಖರೀದಿ ಮೇಲಿನ ಕೂಪನ್ಗಳನ್ನು ಲಕ್ಕಿ ಡ್ರಾ ಮೂಲಕ ವಿಜೇತರ ಆಯ್ಕೆ ಸಂಘದ ಆವಾರದಲ್ಲಿ ಗುರುವಾರ ನಡೆಯಿತು.
2020ರ ನ. 12ರಿಂದ 2021ರ ಜ. 15ರವರೆಗೆ ಸಂಘದ ಸುಪರ್ ಮಾರ್ಕೆಟ್ನಲ್ಲಿ ಚಿನ್ನ ಖರೀದಿಸಿದ ಗ್ರಾಹಕರಿಗೆ ಪ್ರತಿ 2 ಗ್ರಾಂ ಚಿನ್ನಕ್ಕೆ ಹಾಗೂ ಧಾರಾ ಪಶು ಆಹಾರ ಖರೀದಿಸುವ ಗ್ರಾಹಕರಿಗೆ ಪ್ರತಿ ಎರಡು ಚೀಲಗಳಿಗೆ ತಲಾ ಒಂದರಂತೆ ನೀಡಿದ್ದ ಕೂಪನ್ಗಳನ್ನು ಸೇರಿಸಿ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಯಿತು. ಬಹುಮಾನ ವಿಜೇತರು: ಪ್ರಥಮ ಬಹುಮಾನ- ಡಾ. ಪ್ರಭಾಶಂಕರ ಹೆಗಡೆ ಹೊಸೂರು (ಅಲ್ಟೋ-800 ಕಾರ್), ದ್ವಿತೀಯ ಬಹುಮಾನ- ಅರೆಹದ್ದ ಸೊಸೈಟಿ ಸಹಸ್ರಳ್ಳಿ (ಹೊಂಡಾ ಡಿಯೋ ಬೈಕ್), ತೃತೀಯ ಬಹುಮಾನ- ವಿಜಯಾ ಮನೋಹರ ಕುದುಳೆ (ಹೊಂಡಾ ಸಿ.ಡಿ. 110 ಬೈಕ್).
ಟಿ.ಎಸ್.ಎಸ್. ಗ್ರೀನ್ ಗೋಲ್ಡ್ ಗೊಬ್ಬರ ಖರೀದಿಸಿದ ಗ್ರಾಹಕರಿಗೆ ಪ್ರತಿ 2 ಚೀಲಕ್ಕೊಂದು ನೀಡಲಾಗಿದ್ದ ಕೂಪನ್ಗಳ ಲಕ್ಕಿ ಡ್ರಾದಲ್ಲಿ 165ಕ್ಕೂ ಹೆಚ್ಚಿನ ವಿಜೇತರನ್ನು ಆಯ್ಕೆಗೊಳಿಸಲಾಯಿತು. ಮೊದಲನೇ ಬಹುಮಾನ- ಮಧುಕೇಶ್ವರ ಹೆಗಡೆ ಹೆಗ್ಗುಂಬ್ಳಿ (ಹೊಂಡಾ ಸಿ.ಡಿ. 110), ಎರಡನೇ ಬಹುಮಾನ-ರಾಮಚಂದ್ರ ಹೆಗಡೆ (190 ಲೀಟರ್ ರೆಫ್ರಿಜರೇಟರ್), ಮೂರನೇ ಬಹುಮಾನ- ಸಾವಿತ್ರಿ ಹೆಗಡೆ (ವೀಡ್ ಕಟರ್), ನಾಲ್ಕನೇ ಬಹುಮಾನ- ಮಂಜುನಾಥ ಎಚ್.ಕೆ. ಹಾಗೂ ಶಂಕರ ಸಿದ್ದಾಪುರ (20 ಅಡಿ ಏಣಿ), ಐದನೇ ಬಹುಮಾನ-ಸುಭಾಸಗೌಡ ಪಾಟೀಲ(ಹೈ ಪ್ರೆಶ್ಶರ್ ವಾಶರ್) ಆಯ್ಕೆಯಾದರು.
ಸಂಘದ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಆಡಳಿತ ಮಂಡಳಿ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕ, ಸಿಬ್ಬಂದಿ, ಸದಸ್ಯರು ಇದ್ದರು.