ಜಿಲ್ಲೆ

ಚಿನ್ನ ಖರೀದಿಸಲೆಂದು ಬಂದವ ಕರಿಮಣಿ ಸರ ಕದ್ದ

ಇಂದಿರಾ ಎನ್ ಕೆ

ಕಾರ್ಕಳ: ಚಿನ್ನ ಖರೀದಿಸಲೆಂದು ಅಂಗಡಿಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ಚಿನ್ನದ ಕರಿಮಣಿ ಸರ ಕಳವು ಮಾಡಿರುವ ಘಟನೆ ಕಾರ್ಕಳ ಕಸಬಾ ಗ್ರಾಮದ ಮೂರು ಮಾರ್ಗದ ಬಳಿ ನಡೆದಿದೆ.

ಬುಧವಾರ ಮದ್ಯಾಹ್ನ 3 ಗಂಟೆಗೆ ಮೂರು ಮಾರ್ಗದ ಬಳಿ ಇರುವ ಜ್ಯುವೆಲ್ಲರಿಗೆ ಅಪರಿಚಿತ ವ್ಯಕ್ತಿ ಬಂದು ಕೆಲಸದವರಲ್ಲಿ ಚಿನ್ನದ ಕರಿಮಣಿ ಸರ ತೋರಿಸುವಂತೆ ಕೇಳಿದಾಗ, ಸರ ನೋಡಲು ಕೊಟ್ಟಿದ್ದು, ಕೆಲಸದವರು ಒಳಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಖರೀದಿಸಲು ಬಂದ ವ್ಯಕ್ತಿ ಇರಲಿಲ್ಲ. ಆತನಿಗೆ ತೋರಿಸಲು ನೀಡಿದ ಚಿನ್ನದ ಕರಿಮಣಿ ಸರ ಕೂಡ ಕಂಡುಬರಲಿಲ್ಲ.

7.630 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.