ಜಿಲ್ಲೆ

ಮೈಸೂರಿನಲ್ಲಿ 3.90 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಮೈಸೂರು: ವಸಂತನಗರ ಬಡಾವಣೆಯ ಮನೆಯೊಂದರ ಬೀಗ ಮುರಿದು 3.90 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ.

ಬಡಾವಣೆ ನಿವಾಸಿ ಮಾಯಾಂಗ ಮನೆಯಲ್ಲಿ ಕಳವು ನಡೆದಿದೆ. ಮಾಯಾಂಗ ಮಾ.1 ರಂದು ಕುಟುಂಬದವರೊಂದಿಗೆ ಮಂಡ್ಯಕ್ಕೆ ತೆರಳಿದ್ದು, ವಾಪಸ್ ಮನೆಗೆ ಬಂದಾಗ ಮನೆಯ ಕೊಠಡಿಯಲ್ಲಿದ್ದ ಚಿನ್ನಾಭರಣ ಕಳವಾಗಿರುವುದು ತಿಳಿದು ಬಂದಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.