ಜಿಲ್ಲೆ

ಮಾಸ್ಟರ್ ಅಥ್ಲೀಟ್ ಎಂ.ಯೋಗೇಂದ್ರ ಅವರಿಗೆ ಚಿನ್ನ

ಅವಿನಾಶ್ ಜೈನಹಳ್ಳಿ

ಮೈಸೂರು: 43ನೇ ಕರ್ನಾಟಕ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ನಗರದ ಮಾಸ್ಟರ್ ಅಥ್ಲೀಟ್ ಎಂ.ಯೋಗೇಂದ್ರ ಚಿನ್ನದ ಪದಗಳ ಪಡೆದು ಗಮನ ಸೆಳೆದಿದ್ದಾರೆ.

ಹೊಸಕೋಟೆಯ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಶನಿವಾರ ಚಾಂಪಿಯನ್ ಶಿಪ್‌ನ 5000 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಈ ಸಾಧನೆ ಮಾಡಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಗೌರವ ತಂದಿದ್ದಾರೆ.

ಭಾನುವಾರ ನಡೆಯಲಿರುವ 10000 ಮೀಟರ್ ಓಟ ಸ್ಪರ್ಧೆಯಲ್ಲೂ ಭಾಗಿಯಾಗಲಿದ್ದಾರೆ.