ಬೈಂದೂರು: ಕಂಕನಾಡಿಯ ರೋಷನಿ ನಿಲಯ ಕಾಲೇಜಿನಲ್ಲಿ ನಡೆದ ಅಂತರ್ ಕಾಲೇಜು ಕರಾಟೆ ಸ್ಪರ್ಧೆಯ ವೈಯಕ್ತಿಕ ಕುಮಿಟೆ ವಿಭಾಗದಲ್ಲಿ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಾದ ಲಕ್ಷ್ಮೀಕಾಂತ, ನೀಲೇಶ ಮತ್ತು ಸುಶನ್ ಚಿನ್ನದ ಪದಕ ಪಡೆದು ಮಧ್ಯಪ್ರದೇಶದ ಸೌತ್ ವೆಸ್ಟ್ ಜೋನ್‌ನಲ್ಲಿ ನಡೆಯಲಿರುವ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಲಕ್ಷ್ಮೀಕಾಂತ, ನೀಲೇಶ, ಆಯುಷ್ ಪುತ್ರನ್, ಸುಶನ್, ಮಹಮ್ಮದ್ ಶಮ್ಮಜ್, ಆಯುಷ್ ನಾಯಕ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಂತರ್ ಕಾಲೇಜು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿ ಬೈಂದೂರು ಕಾಲೇಜಿನ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ. ಶಾಸಕ ಗುರುರಾಜ್ ಗಂಟಿಹೊಳೆ, ಪ್ರಾಂಶುಪಾಲ ನಾಗರಾಜ ಶೆಟ್ಟಿ, ತರಬೇತುದಾರ ಪ್ರಭಾಕರ ಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.