ಕಾಸರಗೋಡು: ನಗರದ ಕೂಡ್ಲು ಪಾರೆಕಟ್ಟ ಶಾಸ್ತಾ ನಗರದ ಭಜನಾಮಂದಿರವೊಂದರಲ್ಲಿ ದೇವರ ವಿಗ್ರಹಕ್ಕೆ ಅಳವಡಿಸಿದ್ದ ಚಿನ್ನದ ಸರ ಎಗರಿಸಿ ಆ ಜಾಗಕ್ಕೆ ಗಿಲೀಟಿನ ಆಭರಣ ತೊಡಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂದಿರ ಸಮಿತಿ ಮಾಜಿ ಕಾರ್ಯದರ್ಶಿ, ಕೂಡ್ಲು ಹೊಸಮನೆ ರಸ್ತೆ ಸನಿಹದ ನಿವಾಸಿ ದಯಾನಂದ ಶೆಟ್ಟಿ ಎಂಬಾತನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂದಿರ ಸಮಿತಿ ಅಧ್ಯಕ್ಷ ಕೆ.ವೇಣುಗೋಪಾಲ್ ಅವರ ದೂರನ ಮೇರೆಗೆ ಈ ಬಂಧನ ನಡೆದಿದೆ.