ಹುಬ್ಬಳ್ಳಿ: ಇಲ್ಲಿಯ ಗೌಳಿ ಗಲ್ಲಿಯ ಜುವೆಲರಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ನೌಕರನೊಬ್ಬ 40ಲಕ್ಷ ರೂ. ಮೌಲ್ಯದ 400 ಗ್ರಾಂ ಬಂಗಾರದ ಮೂರು ಗಟ್ಟಿ ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಮೂಲತಃ ಬೆಳಗಾವಿ ಹಲಗಿ ಮರಡಿಯ ನಾಗರಾಜ ಎಂಬಾತ ಮೋಸ ಮಾಡಿರುವ ಕುರಿತು ದೂರು ದಾಖಲಾಗಿದೆ.
ರಾಯಚೂರು ಜಿಲ್ಲೆ ಮುದಗಲ್ಲನ ಜುವೆಲರಿ ಅಂಗಡಿಯವರಿಗೆ ತಲುಪಿಸಬೇಕೆಂದು ಚಿನ್ನದ ಗಟ್ಟಿಗಳನ್ನು ಜು. 22ರಂದು ನಾಗರಾಜನಿಗೆ ಕೊಡಲಾಗಿತ್ತು. ಅವುಗಳನ್ನು ಎಲ್ಲಿಯೋ ತೆಗೆದುಕೊಂಡು ಹೋಗಿ ನಂಬಿಕೆ ದ್ರೋಹ, ಮೋಸ ಮಾಡಿದ್ದಾನೆಂದು ಜುವೆಲರಿ ಅಂಗಡಿ ಮಾಲೀಕ ರವೀಶ ಎಂಬುವವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.