ಜಿಲ್ಲೆ

ಕರಾಟೆಯಲ್ಲಿ ಸನ್ಮಿತ್​ಗೆ ಚಿನ್ನ, ಬೆಳ್ಳಿ ಪದಕ

ಬಸವರಾಜ ವೀರಪ್ಪ ಗರಗ

ಸಿದ್ದಾಪುರ: ಇತ್ತೀಚೆಗೆ ಶಿವಮೊಗ್ಗದ ಪ್ರೇರಣಾ ಸಭಾಂಗಣದಲ್ಲಿ ನಡೆದ 5ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್​ಶಿಪ್ ಸ್ಪರ್ಧೆಯಲ್ಲಿ ತಾಲೂಕಿನ ಬಿಳಗಿಯ ಸನ್ಮಿತ್ ಆರ್ ಹತ್ತು ವರ್ಷದೊಳಗಿನ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮತ್ತು ಕುಮತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದುಕೊಂಡಿದ್ದಾನೆ. ಈತನು ಬಿಳಗಿಯ ರಮಾನಂದ ಮಡಿವಾಳ ಹಾಗೂ ರೇಖಾ ರಮಾನಂದ ಮಡಿವಾಳ ದಂಪತಿ ಪುತ್ರ.