ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮಲ್ಲಣ್ಣ ನಾಯ್ಕೋಡಿ, ಮಡಿವಾಳಪ್ಪ ನಾಯ್ಕೋಡಿ, ಈರಪ್ಪ ಕೋಟೆಗೋಳ, ಬಸವರಾಜ ತಳವಾರ ಇತರರಿದ್ದರು. 
ಜಿಲ್ಲೆ

ಗೋಲಗೇರಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ

ಬ್ರಹ್ಮದೇವನಮಡು: ಮಹರ್ಷಿ ವಾಲ್ಮೀಕಿ ಅವರ ಗುಣ, ಆದರ್ಶ ಜೀವನ ನಮಗೆ ಪ್ರೇರಣೆಯಾಗಿದ್ದು, ಅವರು ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ತಳವಾರ ಸಮಾಜದ ಮುಖಂಡ ಮಡಿವಾಳಪ್ಪ ನಾಯ್ಕೋಡಿ ಹೇಳಿದರು.

ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ತಳವಾರ ಸಮಾಜದ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪವಿತ್ರ ಗ್ರಂಥ ರಾಮಾಯಣವನ್ನು ಬರೆದ ಮಹಾನ್ ತತ್ವಜ್ಞಾನಿಯಾಗಿದ್ದಾರೆ. ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂದರು.

ಮುಖಂಡ ಮಲ್ಲಣ್ಣ ನಾಯ್ಕೋಡಿ, ಗ್ರಾಪಂ ಸದಸ್ಯ ಈರಪ್ಪ ಕೋಟೆಗೋಳ, ಬಸವರಾಜ ತಳವಾರ, ನಿಂಗಪ್ಪ ನಾಯ್ಕೋಡಿ, ಭಾಗಣ್ಣ ಕೋಟೆಗೋಳ, ಗೋಲ್ಲಾಳಪ್ಪ ನಾಯ್ಕೋಡಿ, ಮಹಾಂತೇಶ ನಾಯ್ಕೋಡಿ, ಗೋಲ್ಲಾಳ ತಳವಾರ, ರಾಜು ಯಂಕಂಚಿ, ಸಿದ್ದಪ್ಪ ತಳವಾರ, ಸಂಜು ನಾಯ್ಕೋಡಿ, ವೀರೇಶ ನಾಯ್ಕೋಡಿ, ಯಮನಪ್ಪ ನಾಯ್ಕೋಡಿ, ರಾವುತಪ್ಪ ಮಾಗಣಗೇರಿ, ಬಸಪ್ಪ ನಾಯ್ಕೋಡಿ, ಭೀಮಪ್ಪ ನಾಯ್ಕೋಡಿ, ಗ್ರಾಪಂ ಸದಸ್ಯ ಮೈಬೂಬ ಜೋಗೂರ, ಇಸ್ಮಾಯಿಲ್ ಚೌಧರಿ, ಮಹಿಬೂಬ ಚೌಧರಿ, ಮಂಜುನಾಥ ಕೆರಕನಳ್ಳಿ, ವೀರೇಶ ನಾಯ್ಕೋಡಿ, ಮಲ್ಲು ನಾಯ್ಕೋಡಿ ಇತರರಿದ್ದರು.