ಜಿಲ್ಲೆ

ಗೋಲಗೇರಿ ಗೊಲ್ಲಾಳೇಶ್ವರ ರಥೋತ್ಸವ ಏ. 12 ರಂದು

ಗೊಲ್ಲಾಳೇಶ್ವರ ಜಾತ್ರೆ ಆರಂಭ /೧೪ರಂದು ಕಡುಬಿನ ಕಾಳಗ ನಡೆಯಲಿದೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಸಿಂದಗಿ ತಾಲೂಕಿನ ಗೋಲಗೇರಿ ಗೊಲ್ಲಾಳೇಶ್ವರ ಜಾತ್ರೆ ಆರಂಭಗೊAಡಿದ್ದು, ಮಹಾರಥೋತ್ಸವ ಏ.೧೨ ರಂದು ಸಂಜೆ ೫-೩೦ ಗಂಟೆಗೆ ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ಜರುಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಕಾರ್ಯದರ್ಶಿ ಉದಯಕುಮಾರ ಜೇವರ್ಗಿ ತಿಳಿಸಿದ್ದಾರೆ.

ವಂಶಪಾರAಪರ್ಯ ಧರ್ಮದರ್ಶಿಗಳಾದ ಪೂಜ್ಯ ಸಿದ್ರಾಮಪ್ಪ ದೇವರಮನಿ ಹಾಗೂ ಪೂಜ್ಯ ವರಪುತ್ರ ಹೋಳಪ್ಪ ದೇವರಮನಿ ನೇತೃತ್ವದಲ್ಲಿ ಪಂಚಲೋಹದ ಕಳಸಾರೋಹಣ ನಡೆಯಲಿದೆ.

ಜಾತ್ರೆಯ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈಗಾಗಲೇ ಆರಂಭಗೊAಡಿವೆ. ಗೊಲ್ಲಾಳೇಶ್ವರ ಮಹಾಪುರಾಣವನ್ನು ಗುರುಶಾಂತಯ್ಯ ಹಿರೇಮಠ, ಪ್ರಭುಲಿಂಗಯ್ಯ ಮಠ ಅವರ ನಡೆಸಿಕೊಡುತ್ತಿದ್ದಾರೆ.ಏ.೧೪ರಂದು ಕಡುಬಿನ ಕಾಳಗ ನಡೆಯಲಿದೆ. ಏ.೧೬ ರಂದು ಉತ್ಸವ ನಡೆಯಲಿದೆ. ಗೊಲ್ಲಾಳೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ, ಸಿಂದಗಿ ಎಪಿಎಂಸಿ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ೧೩ರಿಂದ ದನಗಳ ಜಾತ್ರೆ ಶುರುವಾಗಿ ೧೫ ದಿನಗಳ ಕಾಲ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ರಥೋತ್ಸವ ಹಾಗೂ ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಉದಯಕುಮಾರ ತಿಳಿಸಿದ್ದಾರೆ.

===

=====