ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಅಣಮವ್ವ ಜೈನಾಪೂರ ಆಯ್ಕೆಯಾದ ಹಿನ್ನೆಲಯಲ್ಲಿ ಬೆಂಬಲಿಗರು, ಮುಖಂಡರು, ಕಾರ್ಯಕರ್ತರು ಸಂಭ್ರಮಿಸಿದರು. ಸಂತೋಷ ಪಾಟೀಲ, ಶ್ರೀಶೈಲ ಚಳ್ಳಗಿ, ಪ್ರಭುಗೌಡ ಪಾಟೀಲ, ಅಮೋಗಿ ಜೈನಾಪೂರ, ಸಂಗನಗೌಡ ಪಾಟೀಲ ಇತರರಿದ್ದರು. 
ಜಿಲ್ಲೆ

ಗೋಲಗೇರಿ ಗ್ರಾಪಂಗೆ ಅಣಮವ್ವ ಜೈನಾಪೂರ ಅವಿರೋಧ ಆಯ್ಕೆ

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ಅಣಮವ್ವ ನಾಗಪ್ಪ ಜೈನಾಪೂರ (ಢವಳಾರ) ಗುರುವಾರ ಅವಿರೋಧ ಆಯ್ಕೆಯಾದರು.

ತಾಪಂ ಇಒ ರಾಮು ಅಗ್ನಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ತಾಲೂಕು ಬಿಜೆಪಿ ಮಂಡಲ ಅಧ್ಶಕ್ಷ ಸಂತೋಷ ಪಾಟೀಲ(ಡಂಬಳ), ಬಿಜೆಪಿ ಮುಖಂಡ ಸಿದ್ದು ಬುಳ್ಳಾ, ಪ್ರಭುಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಶ್ರೀಶೈಲ ಚಳ್ಳಗಿ, ಗೌಡಣ್ಣ ಆಲಮೇಲ, ಸಂಗನಗೌಡ ಪಾಟೀಲ, ಮಹಾಂತೇಶ ಸಾತಿಹಾಳ, ಸೈಪುನಸಾಬ ಕೋರವಾರ, ಶಶಿಕಾಂತ ನಾಯ್ಕಲ್, ಶಿವಣ್ಣ ನಾಗಣಸೂರ ಗೋಲ್ಲಾಳಪ್ಪಗೌಡ ನಾಗಣಸೂರ, ರಮೇಶಗೌಡ ವಂದಾಲ, ಸುನೀಲಗೌಡ ಪಾಟೀಲ, ಯುವ ಮುಖಂಡ ಅಮ್ಮೋಗಿ ಜೈನಾಪುರ, ಗೌತಮ್ ಮೀಟಿ, ಸಲೀಮ್ ಬಾಗವಾನ, ಗೋಲ್ಲಾಳ ಗಾಣೂರ, ಸಿದ್ದಣ್ಣ ತಳವಾರ (ಢವಳಾರ), ಭೂತಾಳಿ ನಾಯ್ಕೋಡಿ ಇತರರಿದ್ದರು. ಗ್ರಾಪಂ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.