ಹುಬ್ಬಳ್ಳಿ: ತಾಲೂಕಿನ ಗೋಕುಲ ಗ್ರಾಮದಲ್ಲಿ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನ. 18ರಂದು ಏರ್ಪಡಿಸಲಾಗಿದೆ. ಇದರ ಅಂಗವಾಗಿ ವಿವಿಧ ಧಾಮಿರ್ಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನ. 17ರಂದು ರಾತ್ರಿ 9.30ರಿಂದ ಜಾಗರಣೆ ವಿವಿಧ ಸಂದವರಿಂದ ಭಜನೆ ನಡೆಯಲಿದೆ.. ನ. 18ರಂದು ಬೆಳಗ್ಗೆ ಹೋಮ, ಹವನ, ಅಭಿಷೇಕ ಮುಂತಾದ ಧಾಮಿರ್ಕ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗ್ಗೆ 10ಕ್ಕೆ ಸುಳ್ಳದ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಯನಾಳದ ಶ್ರೀ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ, ರೇವಡಿಹಾಳದ ಶ್ರೀ ಚಿದ್ರುಪಾನಂದ ಸರಸ್ವತಿ ಸ್ವಾಮೀಜಿ, ಗೋಕುಲದ ಶ್ರೀ ಹಾಲಯ್ಯಸ್ವಾಮಿ ಹಿರೇಮಠ, ಶ್ರೀ ಗಂಗಯ್ಯಸ್ವಾಮಿ ಹಿರೇಮಠ ಅವರ ಸಾನ್ನಿಧ್ಯದಲ್ಲಿ ಶ್ರೀ ವೀರಾಂಜನೇಯಸ್ವಾಮಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.