ಜಿಲ್ಲೆ

ಗೋಕುಲ ಹಬ್ಬ 29ರಿಂದ

Dharwada - Basavaraj Idli

ಹುಬ್ಬಳ್ಳಿ: ತಾಲೂಕಿನ ಗೋಕುಲ ಗ್ರಾಮದ ಶ್ರೀ ವೀರ ಆಂಜನೇಯ ದೇವಸ್ಥಾನದ 25ನೇ ಲಕ್ಷ ದೀಪೋತ್ಸವ ಅಂಗವಾಗಿ ನ. 29ರಿಂದ ಮೂರು ದಿನ ಗೋಕುಲ ಹಬ್ಬ ಏರ್ಪಡಿಸಲಾಗಿದೆ.

ನ. 29ರಂದು ಸಂಜೆ 7ಕ್ಕೆ ರಾಯನಾಳದ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿಗಳಿಂದ ಪ್ರವಚನ, ನಂತರ ಅನ್ನಸಂತರ್ಪಣೆ ನಡೆಯಲಿದೆ.

ನ. 30ರಂದು ಸಂಜೆ 7ಕ್ಕೆ ಅನ್ನಸಂತರ್ಪಣೆ ನಂತರ ಭಜನಾ ಕಾರ್ಯಕ್ರಮ. ಡಿ. 1ರಂದು ಸಂಜೆ ಕಾತಿರ್ಕ ಉತ್ಸವ, ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂದಿಂದ ರಾತ್ರಿ 10.30ಕ್ಕೆ ಗಂಡನಿಗೆ ತಕ್ಕ ಹೆಂಡತಿ ಫುಲ್ ಕಾಮಿಡಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.