ಜಿಲ್ಲೆ

ಗೋಕರ್ಣ ಮಹಾಶಿವರಾತ್ರಿ ಮಂಗಳೋತ್ಸವ

ಗೋಕರ್ಣ: ಒಂಬತ್ತು ದಿನ ನಡೆದ ಮಹಾಶಿವರಾತ್ರಿ ಮಹೋತ್ಸವ ಶನಿವಾರ ರಾತ್ರಿ ಮಂದಿರದಲ್ಲಿ ನಡೆದ ಆಗಮೋಕ್ತ ಕಾರ್ಯಕ್ರಮದಲ್ಲಿ ಶ್ರೀ ಮಹಾಬಲೇಶ್ವರ ಆತ್ಮಲಿಂಗಕ್ಕೆ ಪ್ರಧಾನ ಅರ್ಚಕ ವೇ. ಅಮೃತೇಶ ಹಿರೇ ಅಂಕುರಾರ್ಪಣೆ ಕೈಗೊಳ್ಳುವ ಮೂಲಕ ಮಂಗಳವಾಯಿತು.

ನಂತರ ಆತ್ಮಲಿಂಗಕ್ಕೆ ಮಹಾಮಂಗಳಾರತಿ ನಡೆದು ಯಾಗಶಾಲೆಯಲ್ಲಿ ಒಂಬತ್ತು ದಿನ ಬೆಳೆಸಿ ಅರ್ಪಿಸಲಾದ ವಿವಿಧ ಧಾನ್ಯಗಳ ಅಂಕುರ(ಮೊಳಕೆ)ಗಳನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

ಈ ವೇಳೆ ಅರ್ಚಕರಾದ ವೇ. ಸಾಂಬ ಭಟ್ಟ ಷಡಕ್ಷರಿ, ವೇ. ಕಾರ್ತಿಕ ಅನಂತರಾಜ ಅಡಿ, ಮಂದಿರ ಸಮಿತಿಯ ವೇ. ಸುಬ್ರಹ್ಮಣ್ಯ ಅಡಿ, ಹಿರಿಯ ಉಪಾಧಿವಂತ ಕ್ಷೇತ್ರ ಪುರೋಹಿತ ವೇ. ಮಹಾಬಲ ಉಪಾಧ್ಯ, ವೇ. ಗಣಪತಿ ಪಂಡಿತ, ವೇ. ಸುಬ್ರಹ್ಮಣ್ಯ ಪಂಡಿತ ಮತ್ತಿತರರಿದ್ದರು. ಇದಕ್ಕೂ ಮುನ್ನ ಕೋಟಿತೀರ್ಥ ಪುಷ್ಕರಣಿಯಲ್ಲಿ ಸ್ಥಳೀಯ ಉಪಾಧಿವಂತ ಕ್ಷೇತ್ರ ಪುರೋಹಿತ ವೇ. ಶಿವರಾಮ ಮಯ್ಯರ್ ಸಂಘಟನೆಯಲ್ಲಿ ಅವಭೃತ ಮಹೋತ್ಸವ ಮತ್ತು ಜಲಯಾನ ಪರ್ಯಟನೆ ಸಂಪನ್ನವಾಯಿತು.