ಜಿಲ್ಲೆ

ಆತ್ಮಲಿಂಗ ಸನ್ನಿಧಿಯಲ್ಲಿ ಬಿವೈ ರಾಘವೇಂದ್ರ ಪೂಜೆ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಗೋಕರ್ಣ: ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಶುಕ್ರವಾರ ಕ್ಷೇತ್ರ ಪುರೋಹಿತರ ನೇತೃತ್ವದಲ್ಲಿ ವಿವಿಧ ಧಾರ್ವಿುಕ ಕಾರ್ಯ ನೆರವೇರಿಸಿದರು. ಪ್ರಾತಃಕಾಲದಲ್ಲಿ ಇಲ್ಲಿನ ಶ್ರೀ ಮಹಾಬಲೇಶ್ವರ ಮಂದಿರದಲ್ಲಿ ಆತ್ಮಲಿಂಗಕ್ಕೆ ಪತ್ನಿ ಸಹಿತ ಅವರು ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಶ್ರೀ ಮಹಾಗಣಪತಿಗೆ ಅರ್ಚನೆ ಕೈಗೊಂಡು ಶ್ರೀ ಪಾರ್ವತಿ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮಂದಿರ ಸಮಿತಿಯ ವೇ. ಸುಬ್ರಹ್ಮಣ್ಯ ಅಡಿ, ವೇ. ಪರಮೇಶ್ವರ ಪ್ರಸಾದ, ಪ್ರಧಾನ ಅರ್ಚಕ ವೇ. ಚಂದ್ರಶೇಖರ ಅಡಿ ಮತ್ತು ಉಪಾಧಿವಂತ ವೈದಿಕರು ಪೂಜೆ ನಿರ್ವಹಿಸಿದರು. ಕ್ಷೇತ್ರ ವಿಧಿ: ಇಲ್ಲಿನ ಪುರಾಣ ಪ್ರಸಿದ್ಧ ಪಿತ್ರಸ್ಥಾಲೀಶ್ವರ ಸನ್ನಿಧಿಯಲ್ಲಿ ಧಾರ್ವಿುಕ ಕ್ಷೇತ್ರ ವಿಧಿಯನ್ನು ಕ್ಷೇತ್ರ ಪುರೋಹಿತ ವೇ. ಚಂದ್ರಶೇಖರ ಅಡಿ ಮತ್ತು ವೈದಿಕರ ಪುರೋಹಿತ್ವದಲ್ಲಿ ಅವರು ಸಂಪನ್ನಗೊಳಿಸಿದರು.