ಗೋಕಾಕ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರು ಇಲ್ಲಿನ ನಗರಸಭೆ ಕಚೇರಿ ಎದುರು ಕೈಗೊಂಡ ಅರ್ನಿದಿಷ್ಟ್ಟಾವಧಿ ಮುಷ್ಕರಕ್ಕೆ ಕರವೇ, ಕರ್ನಾಟಕ ದಲಿತ ಪ್ಯಾಂಥರ್ಸ್ ಸಂಟನೆ ಹಾಗೂ ಡಿಎಸ್ಎಸ್ ಡಾ.ಎನ್.ಮೂರ್ತಿ ಬಣದ ಕಾರ್ಯಕರ್ತರು ಶನಿವಾರ ಬೆಂಬಲ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಎಲ್ಲ ಸೌಲಭ್ಯ ವಿಸ್ತರಿಸಬೇಕು. ಪೌರಕಾರ್ಮಿಕರನ್ನು ವಿಶೇಷ ನೇಮಕಾತಿಯಡಿ ನೇಮಕಾತಿ ಮಾಡುವುದು ಸೇರಿ ಪೌರಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಸರ್ಕಾರ ಕೂಡಲೇ ಪರಿಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕರವೇ ತಾಲೂಕಾಧ್ಯ ಬಸವರಾಜ ಖಾನಪ್ಪನವರ, ರಾಜೇಂದ್ರ ಕೆಂಚನಗುಡ್ಡ, ಶಂಕರ ಹೂಲಿಕಟ್ಟಿ, ಸತಾರ ಬೇಪಾರಿ, ಶಿವಾನಂದ ನಿಂಗನ್ನವರ, ಹನಿಸಾಬ್ ಸನದಿ, ರಮೇಶ ಹರಿಜನ, ಶಿವಾನಂದ ಮಾದರ, ಮಹಾದೇವ ಮಕ್ಕಳಗೇರಿ, ಶಂಕರ ಮೇಗಡಿ, ಮಂಜು ಗಟ್ಟನಟ್ಟಿ, ಸಂಜು ಹೊಸಮನಿ, ರಾಹುಲ ಪಾಟೀಲ, ರವಿ ಕಡಕೋಳ, ಜಯೇಶ ತಾಂಬೋಳೆ, ವಿಠ್ಠಲ ಹಿರಗನ್ನವರ, ಸಿದ್ದಪ್ಪ ಬನಕಾರಿ, ಮಂಜುನಾಥ ಗಜಾಕೋಶ ಇತರರಿದ್ದರು.