ಜಿಲ್ಲೆ

ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

ಎಂ.ಎಸ್​.ಹಿರೇಮಠ ಬೆಳಗಾವಿ

ಗೋಕಾಕ: ಅಂಬೇವಾಡಿ ಗ್ರಾಪಂ ಕಾರ್ಯದರ್ಶಿ ನಾಗಪ್ಪ ಕೊಡ್ಲಿ ಮೇಲೆ ಹಲ್ಲೆ ನಡೆಸಿದ ಪುಂಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂದ ತಾಲೂಕು ಟಕದ ವತಿಯಿಂದ ನಗರದಲ್ಲಿ ತಹಸೀಲ್ದಾರ್​ ಹಾಗೂ ತಾಪಂ ಇಒ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಗ್ರಾಪಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಯದರ್ಶಿ ನಾಗಪ್ಪ ಕೊಡ್ಲಿ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿೆಗೆ ಗುರಿ ಪಡಿಸಬೇಕು. ಸರ್ಕಾರಿ ನೌಕರರ ಮೇಲೆ ಪದೇ ಪದೆ ಇಂತಹ ಕೃತ್ಯ ನಡೆಯುತ್ತಿದ್ದು, ಸೂಕ್ತ ರಣೆ ನೀಡಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ನೌಕರರ ಸಂದ ಅಧ್ಯ ವಿನಾಯಕ ಮಾಳಿ, ಬಿ.ಎನ್​.ಶಿಂಗಾಡಿ, ಎಲ್​.ಡಿ.ದೇವರಮನಿ, ರಾಜೇಂದ್ರ ಕುರಬಗಟ್ಟಿ, ಎಸ್​. ಬಿ.ಕೊಂತಿ, ಎಸ್​.ಕೆ.ಮಾಧೂರಿ, ವಿ.ಎಸ್​.ದೊಡ್ಡಮನಿ, ಜಯಶ್ರೀ ಶಿಲವಂತ, ಶಿದ್ರಾಮ ಕೊಟಬಾಗಿ, ಬಿ.ಎಂ.ಮುರಗೋಡ ಇತರರಿದ್ದರು.