ಜಿಲ್ಲೆ

ಕೆ.ಜಿ. ಗೋಕಾಕ ಸ್ಮರಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಗಂಗಾಧರ ನಗರದ ಶ್ರೀಶರಣ ನುಲಿಯ ಚಂದಯ್ಯ ಡಾ. ಬಿ.ಆರ್. ಅಂಬೇಡ್ಕರ್ ಸ್ಮಾರಕ ಅಖಿಲ ಕರ್ನಾಟಕ ಕೊರವರ ಶಿಕ್ಷಣ ಸಂಸ್ಥೆಯ ಪದವಿಪೂರ್ವ ಹಾಗೂ ಪದವಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಕೆ.ಜಿ. ಗೋಕಾಕ ಅವರ 14ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.

ಉಪನ್ಯಾಸಕ ಎಂ.ಐ. ನಿಂಬಾಳ ಅವರು, ಗೋಕಾಕರ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಸೇವೆ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ರೇಣುಕಾ ಗೋಕಾಕ ಮಾತನಾಡಿದರು.

ಕಾರ್ಯದರ್ಶಿ ಗಂಗಾಧರ ಗೋಕಾಕ. ಉಪಾಧ್ಯಕ್ಷೆ ಅಮೃತಾ ಗೋಕಾಕ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಉಪನ್ಯಾಸಕಿ ವೀರಾಪುರದ ಶೈಲಶ್ರೀ ಕಾರ್ಯಕ್ರಮ ನಿರೂಪಿಸಿದರು. ಪ್ರಭಾರಿ ಪ್ರಾಚಾರ್ಯ ಎಸ್.ಎಂ. ಸ್ಥಾವರಮಠ ಸ್ವಾಗತಿಸಿದರು. ಸಿ.ಎಚ್. ಮಾಸೂರ ಪರಿಚಯಿಸಿದರು. ಎಸ್.ಜಿ. ಕೊಟಬಾಗಿ ಪ್ರಾಸ್ತಾವಿಕ ಮಾತನಾಡಿದರು. ಪ್ರವಿಣ ಚಪ್ಪರಮನಿ ವಂದಿಸಿದರು.