ಜಿಲ್ಲೆ

ಸಂಶೋಧನಾ ಪ್ರಬಂಧ ಮಂಡನೆಗೆ ವಿದೇಶಕ್ಕೆ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಗುರುರಾಜ ಹಡಗಲಿ ಅವರು ಆ.20ರಿಂದ 22ರವರೆಗೆ ಇಂಡೋನೇಷ್ಯಾದ ಯೋಗಾಕರ್ತಾದ ‘ಯೂನಿವರ್ಸಿಟಿ ಇಸ್ಲಾಂ ನೇಗೇರಿ’ಯಲ್ಲಿ ಅಂತಾರಾಷ್ಟ್ರೀಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸೊಸೈಟಿ ಆಯೋಜಿಸಿರುವ 9ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ‘ದಿ ಫೇಟ್ ಆಫ್ ವೆಬ್ ರೆಫರನ್ಸಸ್: ಎ ಸ್ಟಡಿ ಆನ್ ಯು.ಆರ್.ಎಲ್ ಸ್ಟೆಬಿಲಿಟಿ ಇನ್ ವೆಬ್ ಕಾಯಟೇಶನ್’ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಲಿದ್ದಾರೆ.

ಸಮ್ಮೇಳನದಲ್ಲಿ 16 ರಾಷ್ಟ್ರಗಳು ಭಾಗವಹಿಸಲಿವೆ.