ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ವಿದ್ಯೆಗೆ ಅಧಿದೇವತೆ ವಿನಾಯಕ. ಸಣ್ಣ ವಯಸ್ಸಿನಲ್ಲೇ ಎಕ್ಸೆಲ್‌ನಂತಹ ಬೃಹತ್ ಸಂಸ್ಥೆ ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಸುಮಂತ್‌ಕುಮಾರ್ ಜೈನ್ ಯುವ ಜನಾಂಗ, ಸಮಾಜಕ್ಕೆ ಪ್ರೇರಣೆ. ಜೆಇಇ, ನೀಟ್‌ನಂತಹ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ಎಕ್ಸೆಲ್ ಸಂಸ್ಥೆ ರಾಜ್ಯಾದ್ಯಂತ ಪ್ರಸಿದ್ಧಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಗುರುವಾಯನಕೆರೆಯ ಎಕ್ಸೆಲ್ ವಿದ್ಯಾಸಂಸ್ಥೆಯ ಅರಮಲೆಬೆಟ್ಟ ಕ್ಯಾಂಪಸ್‌ಗೆ ಭಾನುವಾರ ಭೇಟಿ ನೀಡಿ ಎಕ್ಸೆಲ್ ಪಂಚಪರ್ವ ಸಂಭ್ರಮದ ಪ್ರಯುಕ್ತ ಶ್ರೀ ವಿದ್ಯಾ ಗಣಪತಿ ದೇವರ ವಿಗ್ರಹ ಅನಾವರಣಗೊಳಿಸಿ ಮಾತನಾಡಿದರು.
ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್‌ಕುಮಾರ್ ಅಧ್ಯಕ್ಷತೆ ವಹಿಸಿ, 254 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಎಕ್ಸೆಲ್ ಸಂಸ್ಥೆಯಲ್ಲಿ ಮೂರು ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಅವರನ್ನು ಎಕ್ಸೆಲ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಬೆಳ್ತಂಗಡಿ ಬೆಸ್ಟ್ ಪೌಂಢೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಪ್ರಾಂಶುಪಾಲ ಡಾ.ನವೀನ್ ಮರಿಕೆ, ಪ್ರಭಾರ ಪ್ರಾಂಶುಪಾಲ ಡಾ.ಪ್ರಜ್ವಲ್, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಪ್ರಮುಖರಾದ ಸತೀಶ್ ಕಾಶಿಪಟ್ಣ, ಅಭಿನಂದನ್ ಹರೀಶ್‌ಕುಮಾರ್, ನಾಗೇಶ್ ಕುಮಾರ್ ಗೌಡ, ಸಂತೋಷ್‌ಕುಮಾರ್ ಉಪಸ್ಥಿತರಿದ್ದರು. ಶಿಕ್ಷಕ ಅಜಿತ್‌ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.
ಕಡಿಮೆ ಅವದಿಯಲ್ಲಿ ಎಕ್ಸೆಲ್ ವಿದ್ಯಾ ಸಂಸ್ಥೆ ಉತ್ತಮ ಸಾಧನೆಗೈದಿದ್ದು, ರಾಜ್ಯದಲ್ಲೆ ಉತ್ತಮ ಫಲಿತಾಂಶ ಕೊಡುತ್ತಿರುವ ಕಾಲೇಜು ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ನಮ್ಮ ಊರಿನ ಅನೇಕ ವಿದ್ಯಾರ್ಥಿಗಳು ಎಕ್ಸೆಲ್ ಕಾಲೇಜಿನಲ್ಲಿ ಸೀಟ್ ಕೊಡಲು ನನ್ನ ಬಳಿ ಬರುತ್ತಿದ್ದು, ನಾನು ಅಧ್ಯಕ್ಷ ಸುಮಂತ್‌ಕುಮಾರ್ ಜೈನ್ ಅವರಿಗೆ ಕರೆಮಾಡಿ ಸೀಟಿಗಾಗಿ ವಿನಂತಿಸಿದ್ದೆ. ಡಿ.ಕೆ ಶಿವಕುಮಾರ್ ಉಪಮುಖ್ಯಮಂತ್ರಿ https://www.vijayavani.net/lokayukta-visit-2 https://www.vijayavani.net/yadava-community-district-conference-2