ಆರ್ಡಿ: ಶ್ರದ್ಧೆ, ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಿದಾಗ ದೇವರ ಅನುಗ್ರಹ ಪ್ರಾಪ್ತಿಯೊಂದಿಗೆ ದೇವಳದ ಪಾವಿತ್ರೃ ವೃದ್ಧಿಸುತ್ತದೆ. ಕೃಷ್ಣಮೂರ್ತಿ ಮಂಜರು ಮಡಾಮಕ್ಕಿ ಶ್ರೀ ವೀರಭದ್ರ ಸ್ವಾಮಿ ಸಾನ್ನಿಧ್ಯದ ಶಕ್ತಿ ಹೆಚ್ಚಿಸಿ ಎಲ್ಲೆಡೆಯೂ ಹೆಸರುವಾಸಿಯಾಗಲು ನೀಡಿದ ಸೇವೆಯಿಂದ ಕೀರ್ತಿ ಗಳಿಸಿದ್ದರು ಎಂದು ಮಡಾಮಕ್ಕಿ ಶ್ರೀ ಮಹತೋಭಾರ ವೀರಭದ್ರ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಶಶಿಧರ ಶೆಟ್ಟಿ ಮಡಾಮಕ್ಕಿ ಹೇಳಿದರು.
ಮಡಾಮಕ್ಕಿ ಶ್ರೀ ಮಹತೋಭಾರ ವೀರಭದ್ರ ಸ್ವಾಮಿ ದೇವಸ್ಥಾನ ಆಡಳಿತದಾರ, ಪ್ರಧಾನ ಅರ್ಚಕ ಕೃಷ್ಣಮೂರ್ತಿ ಮಂಜ ಮಡಾಮಕ್ಕಿ ಇತ್ತೀಚೆಗೆ ನಿಧನರಾಗಿದ್ದು, ಮಂಗಳವಾರ ನುಡಿನಮನ ಸಲ್ಲಿಸಿ ಮಾತನಾಡಿದರು.
ಮಡಾಮಕ್ಕಿ ಯಕ್ಷಗಾನ ಮೇಳ ಸಂಚಾಲಕ ಕಿಶನ್ ಹೆಗ್ಡೆ ಪಳ್ಳಿ, ನಿವೃತ್ತ ಶಿಕ್ಷಕ ಶಿವರಾಮ ಶೆಟ್ಟಿ ಬೆಪ್ಡೆ, ವಿಜಯಕುಮಾರ್ ಶೆಟ್ಟಿ ಮಡಾಮಕ್ಕಿ, ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಅಣ್ಣಯ್ಯ ಶೆಟ್ಟಿ ಒಳಬೈಲು, ಶಂಕರ ಶೆಟ್ಟಿ, ಸಂತೋಷ ಶೆಟ್ಟಿ, ಸುಧಾಕರ ನಾಯ್ಕ ಮಡಾಮಕ್ಕಿ, ಸರಸ್ವತಿ ಮಂಜ, ಅನಂತ ಮಂಜ, ಚಂದ್ರ ಮಂಜ, ವಿಮಲಾಕ್ಷಿ ಮಂಜ, ಕಮಲಾಕ್ಷಿ ಮಂಜ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಕೆ.ಅನಂತ ತಂತ್ರಿ ಮಡಾಮಕ್ಕಿ ಕಾರ್ಯಕ್ರಮ ನಿರೂಪಿಸಿದರು.