ಕೊಕ್ಕರ್ಣೆ: ಕಾಡೂರು ಗ್ರಾಮದ ಮುಂಡಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಹೊಸಕಟ್ಟೆಯಲ್ಲಿ 1.4 ಕೋಟಿ ರೂಪಾಯಿ ವೆಚ್ಚದಲ್ಲಿ ಸಭಾಂಗಣ ವಿಸ್ತರಣೆ ಯೋಜನೆಗೆ ಶ್ರೀ ಶೃಂಗೇರಿ ಮಠಾಧಿಪತಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು.
ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸನ್ನಿಧಾನದಲ್ಲಿ ಸ್ಥಾಪನೆಗೊಂಡ ಪೂಜ್ಯರ ಪಾದಗಳಿಗೆ ಪೂಜೆ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಶ್ರೀಗಳು, ಈ ಕಾರ್ಯದಲ್ಲಿ ಪ್ರತಿಯೊಬ್ಬರಿಗೂ ಶ್ರೀ ಶೃಂಗೇರಿ ಶಾರದಾ ವಾತೆಯ ಪೂರ್ಣಾನುಗ್ರಹ ದೊರಕಲಿದೆ ಮತ್ತು ನಿರ್ವ್ನಿವಾಗಿ ಶ್ರೀದಲ್ಲಿ ಕಾರ್ಯಪೂರ್ಣಗೊಳ್ಳಲಿ ಎಂದು ಆಶೀರ್ವದಿಸಿದರು.
ಶ್ರೀ ಶೃಂಗೇರಿ ಮಠ ಉಡುಪಿ ಪ್ರಾಂತೀಯ ಧರ್ವಾಧಿಕಾರಿ ಬ್ರಹ್ಮಶ್ರೀ ವಾಗೀಶ ಶಾಸ್ತ್ರಿ, ಕುಂದಾಪುರ ವಲಯದ ಪ್ರಾಂತೀಯ ಧರ್ವಾಧಿಕಾರಿ ಲೋಕೇಶ ಅಡಿಗ, ಶಾಂಕರತತ್ವ ಜಿಲ್ಲಾ ಪ್ರಧಾನ ಸಂಚಾಲಕ ಟಿ.ವಿಶ್ವನಾಥ ಶಾನುಭೋಗ್, ದೇವಸ್ಥಾನದ ಪ್ರಧಾನ ಅರ್ಚಕ ಸವಿನ್ ಭಟ್ ಮತ್ತು ದಂಪತಿ, ಮುಂಡಾಡಿ ಸತೀಶ್ ಉರಾಳ, ನಿವೃತ್ತ ಉಪನ್ಯಾಸಕ ಗಿರೀಶ್ ಶಾಸ್ತ್ರಿ ಮತ್ತು ದಂಪತಿ, ಹಿರಿಯರಾದ ರಾಮದಾಸ ಶೆಟ್ಟಿ, ದೇವಸ್ಥಾನದ ಅಜಲುಕರ್ತ ಶಂಕರ ಆಚಾರ್ಯ ಮತ್ತು ದಂಪತಿ, ಎಂ.ಬಿ.ಫ್ರೆಂಡ್ಸ್‌ನ ಕೃಷ್ಣ ನಾಯ್ಕ ಬಡಾಬೆಟ್ಟು, ಮುಖ್ಯಶಿಕ್ಷಕ ಸುಧೀರ್ ಕುವಾರ್ ಶೆಟ್ಟಿ, ಕರ್ಜೆ ಸರ್ಕಾರಿ ಜೂನಿಯರ್ ಕಾಲೇಜು ಪ್ರಾಂಶುಪಾಲ ಶ್ರೀಧರ ಶೆಟ್ಟಿ ಮತ್ತು ದಂಪತಿ, ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಾಡಿ ಸಂತೋಷ್ ಪೂಜಾರಿ ಮತ್ತು ಸದಸ್ಯರು ಸಹಕರಿಸಿದರು. ದೇವಸ್ಥಾನ ಆಡಳಿತ ಮುಖ್ಯಸ್ಥ ಎಂ.ವಿಶ್ವನಾಥ ಶೆಟ್ಟಿ ನಿರೂಪಿಸಿದರು.