ಚಿಂಚರಕಿ ಗ್ರಾಮದಲ್ಲಿ ಶಾಂಭವಿ ದೇವಿ ಜಾತ್ರೋತ್ಸವ ಕಾರ್ಯಕ್ರಮವನ್ನು ನವಲಕಲ್‌ನ ಅಭಿನವ ಸೋಮನಾಥ ಶಿವಾಚಾರ್ಯರು ಉದ್ಘಾಟಿಸಿದರು. ಕವಿತಾಳ ಕಲ್ಮಠದ ಅಭಿನವ ಸಿದ್ಧಲಿಂಗಸ್ವಾಮಿ, ತುರ್ವಿಹಾಳದ ಅಮರಗುಂಡ ಶಿವಾಚಾರ್ಯರು, ಕಿಡಿಗಣಯ್ಯಸ್ವಾಮಿ ಉಮಳಿ ಹೊಸೂರು, ಶರಣು ಸಾಹುಕಾರ, ವಿಶ್ವನಾಥ ಹೂಗಾರ ಇತರರಿದ್ದರು. 
ಜಿಲ್ಲೆ

ಭಕ್ತರ ಕಷ್ಟ ದೂರ ಮಾಡುವ ಶಾಂಭವಿ ದೇವಿ

ನರೇಶ್ ಕುಮಾರ್

ಕವಿತಾಳ: ಚಿಂಚರಕಿ ಗ್ರಾಮದ ಆರಾಧ್ಯ ದೈವ ಶಾಂಭವಿ ದೇವಿಗೆ ಭಕ್ತರು ತಲೆಬಾಗಿ ಸೇವೆ ಮಾಡಿದರೆ ತಲೆ ಎತ್ತುವಂತೆ ಮಾಡುತ್ತಾಳೆ ಎಂದು ನವಲಕಲ್‌ನ ಶ್ರೀ ಶಾಂಭವಿ ದೇವಿ ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯರು ಹೇಳಿದರು.

ಗ್ರಾಮದ ಸುಕ್ಷೇತ್ರ ಸಿದ್ಧಪರ್ವತ ಅಂಬಾದೇವಿಯ 83ನೇ ಪುರಾಣ ಪ್ರವಚನ, 14ನೇ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನವಲಕಲ್‌ನ ಶ್ರೀಗಳು ಅಂಬಾದೇವಿ ಬೇಡಿದ ವರ ಕೊಡುವ ದೈವ. ದೇವಿಯನ್ನು ಆರಾಧಿಸುವುದರಿಂದ ಕಷ್ಟಗಳು ದೂರವಾಗುತ್ತವೆ ಎಂದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭ-ಕಳಸ ಮೆರವಣಿಗೆ ಮುಖಾಂತರ ಶ್ರೀದೇವಿ ಮೆರವಣಿಗೆ ನಡೆಯಿತು. ತದನಂತರ ಸಂಜೆ ಅಂಬಾದೇವಿ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು. ಕವಿತಾಳ ಕಲ್ಮಠದ ಅಭಿನವ ಸಿದ್ಧಲಿಂಗ ಸ್ವಾಮಿ, ತುರ್ವಿಹಾಳದ ಅಮರಗುಂಡ ಶಿವಾಚಾರ್ಯರು, ಕಿಡಿಗಣಯ್ಯಸ್ವಾಮಿ ಉಮಳಿ ಹೊಸೂರು, ಶರಣು ಸಾಹುಕಾರ, ವಿಶ್ವನಾಥ ಹೂಗಾರ, ಬಂಡಯ್ಯಸ್ವಾಮಿ, ಬಸವರಾಜ ಸ್ವಾಮಿ, ಅಮರೇಶ, ಜಗದೀಶ ಹೂಗಾರ, ಅಮರೇಶ ಸಾಹುಕಾರ, ಶಾಂತಕುಮಾರ ಹಿರೇಮಠ, ಕಾಶಪ್ಪ ಇತರರಿದ್ದರು.