ಮುದಗಲ್: ಪಟ್ಟಣದ ಸಿದ್ದಾರ್ಥನಗರದಲ್ಲಿ ಹುಲಿಗೆಮ್ಮ ದೇವಿ ಜಾತ್ರೋತ್ಸವ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.
ಜಾತ್ರೆ ನಿಮಿತ್ತ ಮಹಿಳೆಯರಿಂದ ದೇವಿಗೆ ಉಡಿ ತುಂಬುವ ಹಾಗೂ ಬಳೆ ಕೊಡುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹುಲಿಗೆಮ್ಮ ದೇವಿ ಮೂರ್ತಿ ಮೆರವಣಿಗೆ ಮಾಡಲಾಯಿತು.
ಸುರಿಯುವ ಮಳೆಯನ್ನು ಲೆಕಿಸದೆ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ದೇವಿಗೆ ಹೂಗಳಿಂದ ಅಲಂಕಾರ ಮತ್ತು ನೈವೇದ್ಯ ಸಮರ್ಪಣೆ ಮಾಡಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಮೇಗಳಪೇಟೆಯ ಡೊಳ್ಳು ಕುಣಿತ ಎಲ್ಲರ ಗಮನ ಸೆಳೆಯಿತು.
ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ, ಮುಖಂಡರಾದ ಷಣ್ಮುಖಪ್ಪ ಚೆಲುವಾದಿ, ಪೂರ್ಣಾನಂದ, ರಂಗನಾಥ, ಲಿಂಗಪ್ಪ ಮಡಿವಾಳರ, ರಾಜು ಡಿ.ಜೆ, ರಾಮು ಡಿ.ಜೆ, ಸುರೇಶ, ಹುಸೇನಪ್ಪ ಇದ್ದರು.