ಅರಟಾಳ: ದೇವಿಯ ಧ್ಯಾನ ಮಾಡಿದರೆ. ಭವಕ್ಕೆ ಬಂದ ಕಷ್ಟಗಳು ದೂರವಾಗಿ ಜೀವನದಲ್ಲಿ ಸುಖ, ಶಾಂತಿ ಸಿಗುತ್ತದೆ ಎಂದು ಬಾಡಗಿ ವೇದಮೂರ್ತಿ ಸಂಗಯ್ಯ ಹಿರೇಮಠ ಹೇಳಿದರು.
ಅವರು ಬುಧವಾರ ಗ್ರಾಮದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ನಿಮಿತ್ತ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಮುತ್ತೈದೆಯರ ಉಡಿತುಂಬುವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಬೆಳಗ್ಗೆೆ ದೇವರಿಗೆ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಯಿತು. 101 ಮುತ್ತೈದೆಯರ ಉಡಿ ತುಂಬಲಾಯಿತು. ನಂತರ ಮಹಾಪ್ರಸಾದ ವಿತರಿಸಲಾಯಿತು. ಮಾಹಾಂತಯ್ಯ ಹಿರೇಮಠ, ಸದಾನಂದ ಮಾಡಗ್ಯಾಳ ಮಾತನಾಡಿದರು.
ಯಶವಂತರಾವ ಸಾಳುಂಕೆ, ಸೌರಭ ಸಾಳುಂಕೆ, ಪರಮಾನಂದ ಖ್ಯಾಡಿ, ಕಿರಣ ನಿಂಬಳಕರ, ಸಿ.ಎಚ್.ಬಿರಾದಾರ, ಗಣಪತಿ ಭಂಡಾರಿ, ಶಂಕರ ಮಾಳಿ, ಹಸನಸಾಬ್ ನದಾ, ಚನ್ನಬಸು ಬಿರಾದಾರ, ಹನುಮಂತ ಬಡಿಗೇರ, ವಿಲಾಸ ಮಾಳಿ, ನಿಂಗಪ್ಪ ಸೊನ್ನದ, ಗೋಪಾಲ ಗೊರವ, ಸುನಂದಾ ಮಾಳಿ, ಅನ್ನಪೂರ್ಣಾ ಬಿರಾದಾರ, ಕಲಾವತಿ ನಿಂಬಾಳಕರ, ಸುಶೀಲಾ ಜಂಬಗಿ, ಸಾಯವ್ವ ಬನಜ, ಶಂಕುತಲಾ ಖ್ಯಾಡಿ, ಮಲ್ಲಮ್ಮ ಮಾಡಗ್ಯಾಳ, ಸಾವಿತ್ರಿ ಜಂಬಗಿ, ರಾಣಿ ದಮಡಿ, ರೇಷ್ಮಾ ನದಾ, ಗ್ರಾಮಸ್ಥರು ಇದ್ದರು.