ಜಿಲ್ಲೆ

ದೇವರ ಮನೆಯ ದೀಪದಿಂದ ಬೆಂಕಿ ಹತ್ತಿ ವೃದ್ಧೆ ಸಾವು

Haveri - Kariyappa Aralikatti

ರಾಣೆಬೆನ್ನೂರ: ದೇವರ ಮನೆಯಲ್ಲಿ ಪೂಜೆ ಮಾಡಲು ಹೋದ ವೃದ್ಧೆಯ ಸೀರೆಗೆ ಬೆಂಕಿ ಹತ್ತಿಕೊಂಡು ಮೃತಪಟ್ಟ ಘಟನೆ ಇಲ್ಲಿಯ ಮೇದಾರ ಓಣಿಯಲ್ಲಿ ಸೋಮವಾರ ನಡೆದಿದೆ.

ಕರಬಸಪ್ಪ ಬೇನಕಲ್ಲಪ್ಪ ಮೇದಾರ (88) ಮೃತ ವೃದ್ಧೆ.

ಇವರು ದೇವರ ಮನೆಯಲ್ಲಿ ಪೂಜೆ ಮಾಡಲು ಹೋದಾಗ ದೇವರ ಮುಂದಿದ್ದ ದೀಪದಿಂದ ಆಕಸ್ಮಿಕವಾಗಿ ಸೀರೆಗೆ ಬೆಂಕಿ ಹತ್ತಿಕೊಂಡು ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದರು. ಕೂಡಲೇ ಅವರನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.