ಐಗಳಿ: ದೇವರು ಕರುಣಿಸಿದ ಕಣ್ಣಿನ ದಷ್ಟಿ ಕಾಪಾಡಿಕೊಳ್ಳಬೇಕು. ಆರಂಭಿಕ ಹಂತದಲ್ಲಿ ದಷ್ಟಿ ಸಮಸ್ಯೆ ಪತ್ತೆ ಹಚ್ಚಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ರೋಟರಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು. ಗ್ರಾಮದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಣ್ಣು ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸುದರ್ಶನ ಕಣ್ಣಿನ ಆಸ್ಪತ್ರೆಯ ತಜ್ಞ ಡಾ.ಸಂಜು ಕುಲಕರ್ಣಿ ಮಾತನಾಡಿ, 40 ವರ್ಷಗಳ ನಂತರ ಸಹಜವಾಗಿ ಪ್ರತಿಯೊಬ್ಬರಲ್ಲಿ ಕಣ್ಣಿನ ದೋಷಗಳು ಕಾಣಲಾರಂಭಿಸುತ್ತವೆ ಎಂದರು. ಮುಖಂಡರಾದ ಸಿ.ಎಸ್.ನೇಮಗೌಡ ಮಾತನಾಡಿದರು.
80ಕ್ಕೂ ಹೆಚ್ಚು ಜನರಿಗೆ ಕಣ್ಣಿನ ತಪಾಸಣೆ ನಡೆಸಿ, ಔಷಧ ಮತ್ತು ಕನ್ನಡಕ ಉಚಿತವಾಗಿ ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಶಕುಂತಲಾ ಪಾಟೀಲ, ರೋಟರಿ ಸಂಸ್ಥೆಯ ಅಧ್ಯಕ್ಷ ಸಚಿನ ದೇಸಾಯಿ, ರವಿ ಜಿ.ಎಂ., ಗ್ರಾಪಂ ಸದಸ್ಯರಾದ ಬಿ.ಎಸ್.ಬಿರಾದಾರ, ಅಂಬಣ್ಣ ಬಿರಾದಾರ, ಸಿದ್ದಪ್ಪ ಬಳ್ಳೊಳ್ಳಿ, ಎ.ಎಸ್.ತೆಲಸಂಗ, ಪಿಡಿಒ ರಾಜೇಂದ್ರ ಪಾಠಕ, ಶೇಖರ ಕೋಲಾರ, ಮೇಘರಾಜ ಪಾರಮಾರ, ಅರುಣ ಸೌದಾಗರ ಇತರರಿದ್ದರು.