ಜಿಲ್ಲೆ

ದೇವರ ಧ್ಯಾನದಿಂದ ಅಹಂಕಾರ ದೂರ

ಪ್ರಶಾಂತ ಹೂಗಾರ

ಹಾರೂಗೇರಿ: ನಿರಂತರ ಗುರುವಿನ ಮಾರ್ಗದರ್ಶನ, ಮಹಾತ್ಮರ ಅಮೃತವಾಣಿ ಹಾಗೂ ದೇವರ ಧ್ಯಾನದಿಂದ ಅಹಂಕಾರ ತ್ಯಜಿಸಲು ಸಾಧ್ಯ ಎಂದು ಹೇಮಕೂಟ ಹಂಪಿಯ ವಿದ್ಯಾನಂದ ಭಾರತಿ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಡಾ.ಶಿವಾನಂದ ಭಾರತಿ ಸಭಾಭವನದಲ್ಲಿ ಬುಧವಾರ ಚನ್ನವೃಷಭೇಂದ್ರ ದೇವರಕೊಂಡ ಅಜ್ಜನ 41ನೇ ವೇದಾಂತ ಪರಿಷತ್ ಹಾಗೂ ಜಾತ್ರಾ ಮಹೋತ್ಸವದ 4ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸುಕ್ಷೇತ್ರ ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಸೇವಾ ಮನೋಭಾವ ಹಾಗೂ ನಿರ್ಮಲವಾದ ಮನಸ್ಸು ಮೈಗೂಡಿಸಿಕೊಂಡು ಶ್ರದ್ಧಾ, ಭಕ್ತಿಯಿಂದ ನಿತ್ಯ ಪರಮಾತ್ಮನ ಆರಾಧನೆ ಮಾಡಿದರೆ ಬದುಕಿನ ಕಷ್ಟ-ಕಾರ್ಪಣ್ಯಗಳು ದೂರಾಗಿ ಯಶಸ್ಸು ಪ್ರಾಪ್ತವಾಗುತ್ತದೆ ಎಂದರು.
ಸಮಾರಂಭದ 4ನೇ ದಿನ ಪರಮಭಕ್ತರಾದ ಸದಲಗಿ (ಗಾಳಿ) ಸಹೋದರರು ಪ್ರಸಾದ ವ್ಯವಸ್ಥೆ ಮಾಡಿದ್ದರು.

ರಾಜು ಕರ್ಣವಾಡಿ, ವಿಠ್ಠಲ ಬಂತಿ, ರಾಘವೇಂದ್ರ ಕುಲಕರ್ಣಿ, ವಿಜಯ ಬಂತಿ, ನೇಮಿನಾಥ ಕೊತ್ತಲಗಿ, ಬಾಬು ಹಳ್ಳೂರ, ಗೋಪಾಲ ಧರ್ಮಟ್ಟಿ, ಸುರೇಶ ಧರ್ಮಟ್ಟಿ, ಜ್ಯೋತೆಪ್ಪ ಉಮರಾಣಿ, ಬಾಬು ಪರಮಗೌಡರ, ಡಿ.ಸಿ.ಸದಲಗಿ, ಶ್ರೀಪತಿ ದಟವಾಡ ಇತರರಿದ್ದರು. ಶ್ರೀಮಠದ ಕಾರ್ಯದರ್ಶಿ ಅಪ್ಪಾಸಾಹೇಬ ಕುಲಕರ್ಣಿ ನಿರೂಪಿಸಿದರು.