ಜಿಲ್ಲೆ

ಚಿರತೆ ದಾಳಿಗೆ ಮೇಕೆಗಳು ಬಲಿ

ಲಲಾಟಾಕ್ಷ ಎಸ್

ಶ್ರೀರಂಗಪಟ್ಟಣ: ತಾಲೂಕಿನ ಪೀಹಳ್ಳಿ, ಬನ್ನಹಳ್ಳಿ ಹುಲ್ಕೆರೆ ಗ್ರಾಮಗಳಲ್ಲಿ ಚಿರತೆ ದಾಳಿ ಮಾಡಿ ಮೇಕೆ, ಕುರಿಗಳನ್ನು ತಿಂದು ಹಾಕಿದೆ.


ಬುಧವಾರ ರಾತ್ರಿ ಪೀಹಳ್ಳಿ ಗ್ರಾಮದ ರೈತ ಪಟೇಲ್ ರೇವಣ್ಣ ಅವರ ಮೇಕೆಯನ್ನು ಚಿರತೆ ಕೊಂದಿದೆ. ಹಿಂದಿನ ದಿನ ಅದೇ ಗ್ರಾಮದ ಬೀದಿಮನೆ ದೇವೇಗೌಡ ಅವರ ಆಡುಗಳ ಮೇಲೆ ದಾಳಿ ಮಾಡಿತ್ತು. ಹುಲ್ಕೆರೆ ಗ್ರಾಮದ ಸುರೇಶ್ ಅವರಿಗೆ ಸೇರಿದ ಕುರಿ ಹಾಗೂ ಬನ್ನಹಳ್ಳಿ ಗ್ರಾಮದಲ್ಲಿ ಆಡಿನ ಮರಿಯನ್ನು ಕೊಂದು ಹಾಕಿದೆ. ತಾಲೂಕಿನ ಅರಕೆರೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಳೆದ ಮೂರ‌್ನಾಲ್ಕು ದಿನಗಳಿಂದ ನಿರಂತರವಾಗಿ ಚಿರತೆ ದಾಳಿ ನಡೆಯುತ್ತಿದ್ದು, ಅರಣ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.