ಸರಗೂರು ತಾಲೂಕಿನ ಹಲಸೂರು ಗ್ರಾಮದಲ್ಲಿ ಹುಲಿ ದಾಳಿಗೆ ಸೋಮಣ್ಣ ನಾಯಕ ಅವರ ಮೇಕೆ ಬಲಿಯಾದ.  
ಜಿಲ್ಲೆ

ಹುಲಿ ದಾಳಿಗೆ ಮೇಕೆ ಬಲಿ

ಅಭಿನಯ್ ಎಚ್.ಎಂ

ಸರಗೂರು: ವಲಯ ವ್ಯಾಪ್ತಿಯ ಹಲಸೂರು ಗ್ರಾಮದ ಜಮೀನಿನಲ್ಲಿ ಮೇಯ್ಯುತ್ತಿದ್ದ ಮೇಕೆ ಹುಲಿ ದಾಳಿಗೆ ಭಾನುವಾರ ಬಲಿಯಾಗಿದೆ.

ಗ್ರಾಮದ ಸೋಮಣ್ಣ ನಾಯಕ ಅವರು ಜಮೀನಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದಾಗ ನುಗು ಜಲಾಶಯದ ಕಾಡಿನಿಂದ ಹೊರಬಂದ ಹುಲಿ ಮೇಕೆಗಳ ಮೇಲೆ ದಾಳಿ ನಡೆಸಿದೆ. ಇದರಲ್ಲಿ ಮೇಕೆಯೊಂದರ ಅರ್ಥ ಭಾಗವನ್ನು ತಿಂದು ಉಳಿದದ್ದನ್ನು ಕಾಡಿನೊಳಗೆ ಎಳೆದುಕೊಂಡು ಹೋಗುವ ಸಂದರ್ಭ ರೈತರು ಕೂಗಾಡಿದಾಗ ಅಲ್ಲೇ ಬಿಟ್ಟು ಹೋಗಿದೆ ಎಂದು ರೈತ ಸೋಮಣ್ಣ ನಾಯಕ ತಿಳಿಸಿದ್ದಾರೆ.