ಜಿಲ್ಲೆ

ಹುಲಿ ದಾಳಿಗೆ ಮೇಕೆ ಬಲಿ

ವಸಂತಕುಮಾರ್ ಬಿ

ಸರಗೂರು: ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಅರಣ್ಯ ವಲಯ ವ್ಯಾಪ್ತಿಯ ಜಯಲಕ್ಷ್ಮೀಪುರ ಗ್ರಾಮದ ಕೃಷ್ಣಭೊವಿ ಅವರ ಜಮೀನಿನಲ್ಲಿ ಸೋಮವಾರ ಹುಲಿ ದಾಳಿ ನಡೆಸಿ ಮೇಕೆಗಳನ್ನು ಕೊಂದು ಹಾಕಿದೆ.

ಕೃಷ್ಣಬೊವಿ ಅವರ ಮೂರು ಮೇಕೆಗಳು ಬಲಿಯಾಗಿವೆ. ಜಮೀನಿನಲ್ಲಿ ಅವಿತು ಕುಳಿತಿದ್ದ ಹುಲಿ ಮೇಕೆಗಳ ಹಿಂಡಿನ ಮೇಲೆ ಏಕಾಏಕಿ ದಾಳಿ ನಡೆಸಿ 3 ಮೇಕೆ ಕೊಂದು ಅದರಲ್ಲಿ ಒಂದು ಮೇಕೆಯನ್ನು ಹೊತ್ತೊಯ್ದಿದೆ.

ಈ ಬಗ್ಗೆ ಗ್ರಾಮದ ಮುಖಂಡ ವೆಂಕಟರಾಮು ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ. ಘಟನೆ ನಡೆದು ಸುಮಾರು ತಾಸಾದರೂ ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷೃ ವಹಿಸಿದ್ದಾರೆ. ಕಳೆದ ತಿಂಗಳು ಜಾನುವಾರುಗಳು ಹಾಗೂ ಜನರ ಮೇಲೆ ದಾಳಿ ಮಾಡಿದೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಸುಮ್ಮನಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. ಹುಲಿ ಸೆರೆಗೆ ಬೋನು ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅಲ್ಲದ ಜಾನುವಾರು ಹಾಗೂ ಮೇಕೆ ಹುಲಿ ದಾಳಿಗೆ ಬಲಿಯಾಗಿರುವ ಸಂಬಂಧ ಯಾವುದೇ ಅರ್ಜಿ ಸಲ್ಲಿಸಿದರೂ ಯಾವುದೇ ಪರಿಹಾರ ಸಿಗುತ್ತಿಲ್ಲ. ಕಾಡಾನೆಗಳು ಜಮೀನಲ್ಲಿ ಬೆಳೆದ ಬೆಳೆಗಳನ್ನು ನಾಶ ಮಾಡಿ ಹೋಗುತ್ತಿದ್ದರೂ ರೈಲು ಕಂಬಿ ಅಳವಡಿಕೆಗೆ ಕ್ರಮ ಕೈಗೊಂಡಿಲ್ಲ. ಮೇಕೆಗಳನ್ನು ಕಳೆದುಕೊಂಡಿರುವ ಕೃಷ್ಣಭೋವಿ ಅವರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.