ಜಿಲ್ಲೆ

ಚಿರತೆ ದಾಳಿಗೆ ಮೇಕೆ ಬಲಿ

ಪ್ರಸಿನ್ ಕೆ.ಆರ್

ಹನೂರು: ತಾಲೂಕಿನ ಗಂಗನದೊಡ್ಡಿ ಗ್ರಾಮದ ಹೊರವಲಯದ ಜಮೀನೊಂದರ ಬಳಿ ಶನಿವಾರ ಮಧ್ಯಾಹ್ನ ಚಿರತೆ ದಾಳಿಗೆ ಮೇಕೆಯೊಂದು ಬಲಿಯಾಗಿದೆ.

ತುಮಕೂರಿನ ಶಿರಾದ ಕುಳ್ಳಯ್ಯ ಎಂಬುವರು ಕಳೆದ ತಿಂಗಳ ಹಿಂದೆ 50ಕ್ಕೂ ಹೆಚ್ಚು ಮೇಕೆಗಳೊಂದಿಗೆ ತಾಲೂಕಿಗೆ ಆಗಮಿಸಿದ್ದು, ಅಲ್ಲಲ್ಲಿ ಬೀಡು ಬಿಡುವುದರ ಮೂಲಕ ಮೇಕೆಗಳನ್ನು ಮೇಯಿಸುತ್ತಿದ್ದರು. ಎಂದಿನಂತೆ ಗಂಗನದೊಡ್ಡಿ ಜಮೀನೊಂದರ ಸಮೀಪದಲ್ಲಿ ಮೇಕೆಗಳನ್ನು ಮೇಯಲು ಬಿಟ್ಟಿದ್ದರು. ಮಧ್ಯಾಹ್ನ 3ರ ವೇಳೆಯಲ್ಲಿ ಕಬ್ಬಿನಗದ್ದೆಯಿಂದ ಹೊರ ಬಂದ ಚಿರತೆ ಮೇಕೆಯೊಂದರ ಮೇಲೆ ದಾಳಿ ನಡೆಸಿ ಸಾಯಿಸಿದೆ. ಸುದ್ದಿ ತಿಳಿದು ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಅವರು ಆಗಮಿಸಿ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದಾಗ ಸ್ಥಳಕ್ಕಾಗಮಿಸಿದ ಡಿಆರ್‌ಎಫ್‌ಒ ವಿನಾಯಕ ಹಾಗೂ ಅರಣ್ಯ ರಕ್ಷಕ ಅಶೋಕ್ ಪರಿಶೀಲನೆ ನಡೆಸಿದರು.