ಚಿರತೆ ದಾಳಿಗೆ ಮೇಕೆ ಮರಿ ಮೃತಪಟ್ಟಿರುವುದನ್ನು ಗುರುವಾರ ಡಿಆರ್‌ಎಫ್‌ಒ ದೀಪಕ್ ಹಾಗೂ ತಂಡ ಪರಿಶೀಲಿಸಿದರು. 
ಜಿಲ್ಲೆ

ಚಿರತೆ ದಾಳಿಗೆ ಮೇಕೆ ಬಲಿ

ರವಿಕುಮಾರ್ ಪಿ. ಕೆ

ಕೊಳ್ಳೇಗಾಲ: ತಾಲೂಕಿನ ಕುರುಬನಕಟ್ಟೆ ಸಮೀಪದ ತೋಟದ ಮನೆಯಲ್ಲಿ ಬುಧವಾರ ತಡರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆಯನ್ನು ಚಿರತೆ ಕೊಂದಿದೆ.

ರೋಮಿಯೋ ಕುಮಾರ್ ಅವರ ಮೇಕೆ ಮರಿ ಇದಾಗಿದ್ದು, ಎಂದಿನಂತೆ ರಾತ್ರಿ ಕೊಟ್ಟಿಗೆಯಲ್ಲಿ ಮೇಕೆ ಮರಿಯನ್ನು ಕಟ್ಟಿ ಹಾಕಲಾಗಿತ್ತು. ತಡರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಕೊಟ್ಟಿಗೆಯಲ್ಲಿ ಮೇಕೆ ಮರಿಗಳು ಚೀರುವ ಶಬ್ದ ಕೇಳಿಬಂದಿದೆ. ಇದನ್ನು ಗಮನಿಸಿದ ರೋಮಿಯೋ ಕುಮಾರ್ ಮನೆಯಿಂದ ಹೊರ ಬಂದು ಕೊಟ್ಟಿಗೆ ಕಡೆಗೆ ಬ್ಯಾಟರಿ ಬಿಟ್ಟು ನೋಡಿದ್ದಾರೆ. ಚಿರತೆ ಮೇಕೆ ಮರಿಯನ್ನು ಎಳೆದೊಯ್ಯುವುದನ್ನು ಕಂಡಿದ್ದಾರೆ. ತಕ್ಷಣ ಚಿರತೆಯನ್ನು ಓಡಿಸಲು ಯತ್ನಿಸಿದ್ದು. ಈ ವೇಳೆ ಚಿರತೆ ಮೇಕೆ ಮರಿಯನ್ನು ಹಿಡಿದು ಸ್ವಲ್ಪ ದೂರ ಎಳೆದೊಯ್ದಿದೆ. ರೋಮಿಯೋ ಕುಮಾರ್ ಚಿರತೆ ಹಿಂಬಾಲಿಸಿದ್ದು. ಈ ವೇಳೆ ಗಾಬರಿಗೊಂಡ ಚಿರತೆ ಮೇಕೆ ಮರಿ ಬಿಟ್ಟು ಹೋಗಿದೆ.

ವಿಚಾರ ತಿಳಿದ ಡಿಆರ್‌ಎಫ್‌ಒ ದೀಪಕ್ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಚಿರತೆ ಸೆರೆಗೆ ಬೋನು ಅಳವಡಿಸಿ ಕ್ರಮವಹಿಸುವಂತೆ ರೈತ ಶೈಲೇಂದ್ರ ಶ್ರೀಕಂಠಸ್ವಾಮಿ ತಿಳಿಸಿದ್ದಾರೆ.