ಜಿಲ್ಲೆ

ಮೇಕೆ ಮೇಯಿಸುತ್ತಿದ್ದ ಮಹಿಳೆ ಹಾವು ಕಚ್ಚಿ ಸಾವು

Haveri - Kariyappa Aralikatti

ಶಿಗ್ಗಾಂವಿ: ಮೇಕೆ ಮೆಯಿಸಲು ಹೋದ ಮಹಿಳೆ ಹಾವು ಕಚ್ಚಿ ಮೃತಪಟ್ಟ ಘಟನೆ ತಾಲೂಕಿನ ಕಮಲಾನಗರ ತಾಂಡಾದಲ್ಲಿ ಭಾನುವಾರ ನಡೆದಿದೆ.
ತಾಂಡಾದ ಅನಸವ್ವ ಹನುಮಂತಪ್ಪ ಲಮಾಣಿ (55) ಮೃತ ಮಹಿಳೆ.
ಇವರು ಮೇಕೆ ಮೇಯಿಸಲು ಹೋದಾಗ ಹಾವು ಕಚ್ಚಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.