ಜಿಲ್ಲೆ

ಮೇಕೆ ಕಳ್ಳಿಯ ಬಂಧನ

ಎನ್.ವೆಂಕಟೇಶ್

ಕಾರು ವಶ, ಆರೋಪಿ ನ್ಯಾಯಾಂಗ ಬಂಧನಕ್ಕೆ

ಚಿಂತಾಮಣಿ: ಮೇಕೆ ಕಳವು ಆರೋಪ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಮಹಿಳೆಯನ್ನು ಬಂಧಿಸಿ, ಕಾರನ್ನು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಮೂಡಚಂತಲಹಳ್ಳಿಯ ಶಾರದಾ ಬಂಧಿತೆ. ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಾ.15ರಂದು ಶನಿವಾರ ರಾತ್ರಿ ಮನೆ ಬಳಿಯ ಶೆಡ್‌ನಲ್ಲಿ ಆರು ಮೇಕೆಗಳು ಹಾಗೂ ಹಸುಗಳನ್ನು ಕಟ್ಟಿದ್ದೆ. ಮರುದಿನ 1 ಮೇಕೆ ನಾಪತ್ತೆಯಾಗಿತ್ತು ಎಂದು ಮಾಡಿಕೆರೆ ಗ್ರಾಮದ ಅಪ್ಪಯ್ಯರೆಡ್ಡಿ ಎಂಬುವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಾಚರಣೆಗಿಳಿದ ಪೊಲೀಸರು ಶಾರದಾ ಎಂಬಾಕೆಯನ್ನು ಎರಡು ದಿನಗಳ ಹಿಂದೆ ಬಂಧಿಸಿ ಕಳ್ಳತನಕ್ಕೆ ಆಕೆ ಬಳಸುತ್ತಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಆಕೆಯ ಜತೆಯಲ್ಲಿದ್ದವರ ಪತ್ತೆಗೆ ಬಲೆ ಬೀಸಿದ್ದಾರೆ.