ಜಿಲ್ಲೆ

ಶಾಸಕರ ಬೆಂಬಲಿಗರಿಗೆ ಗೋವಾ ಟ್ರಿಪ್​

ಚಿಕ್ಕಬಳ್ಳಾಪುರ ಡೆಸ್ಕ್


ಚುನಾವಣಾ ಪರಿಶ್ರಮಕ್ಕೆ ಪ್ರವಾಸಭಾಗ್ಯ : ಪ್ರತಿ ವಾರ್ಡ್​ನಿಂದ 5 ಮಂದಿಗೆ ಅವಕಾಶ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವಿಗೆ ಶ್ರಮಿಸಿದ ಬೆಂಬಲಿಗರನ್ನು ಪ್ರವಾಸಕ್ಕೆ ಕಳುಹಿಸುವ ಮೂಲಕ ಅವರನ್ನು ಖುಷಿಪಡಿಸಲಾಗುತ್ತಿದೆ.
ಹೌದು! ನಗರದಲ್ಲಿನ 31 ವಾರ್ಡ್​ಗಳಿಂದ ಕನಿಷ್ಠ 5 ಮಂದಿಯನ್ನು ಗೋವಾಗೆ ಕಳುಹಿಸಲಾಗುತ್ತಿದೆ. ಒಂದೆರಡು ದಿನ ಪ್ರವಾಸದಲ್ಲಿ ಕಾಲ ಕಳೆದು, ಖುಷಿಯಿಂದ ಬರುವಂತೆ ತಿಳಿಸಲಾಗಿದೆ. ಇದರಿಂದ ತಂಡೋಪ ತಂಡವಾಗಿ ತೆರಳುತ್ತಿರುವ ಪದಾಧಿಕಾರಿಗಳು, ಮುಖಂಡರು ಮತ್ತು ಶಾಸಕರ ಬೆಂಬಲಿಗರು ಟ್ರಿಪ್​ನಲ್ಲಿ ಎಂಜಾಯ್​ ಮಾಡುತ್ತಿದ್ದಾರೆ.
ಮಾಜಿ ಸಚಿವ ಡಾ.ಕೆ.ಸುಧಾಕರ್​ ಸ್ಪರ್ಧೆಯಿಂದ ೇತ್ರವು ರಾಜ್ಯಾದ್ಯಂತ ಗಮನ ಸೆಳೆದಿತ್ತು. ಇದರ ನಡುವೆ ಪದ ಹೈಕಮಾಂಡ್​ನಿಂದ ಕೊನೇ ಕ್ಷಣದಲ್ಲಿ ಟಿಕೆಟ್​ ಗಿಟ್ಟಿಸಿಕೊಂಡು ಬಂದ ಪ್ರದಿಪ್​ ಈಶ್ವರ್​, ಕೇವಲ 21 ದಿನಗಳಲ್ಲಿ ಭರ್ಜರಿ ಪ್ರಚಾರ ನಡೆಸಿ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ಬಹುತೇಕ ನಾಲ್ಕನೇ ಗೆಲುವು ಖಚಿತ ಎಂಬ ಭಾವನೆಯಲ್ಲಿದ್ದ ಬಿಜೆಪಿ ನಾಯಕರಿಗೆ ಸೋಲಿನ ರುಚಿ ತೋರಿಸಿದರು.
ಮತ್ತೊಂದೆಡೆ ಕೈ ಪಾಳಯದಲ್ಲಿ ಪ ಸಂಟನೆಯಲ್ಲಿ ತೊಡಗಿಸಿಕೊಳ್ಳದ ವ್ಯಕ್ತಿಗೆ ಟಿಕೆಟ್​ ಕೊಟ್ಟಿದ್ದಾರೆ ಎಂಬ ಮಾತಿನ ನಡುವೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಪ್ರದಿಪ್​ ಈಶ್ವರ್​ ಬೆಂಬಲಿಗರು, ಮುಖಂಡರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕೆಲಸ ಮಾಡಿದ್ದರು. ಇದರ ನಡುವೆ ಗೆಲುವು ಸಾಧಿಸುತ್ತಿದ್ದಂತೆ ದೊಡ್ಡ ಸಂಭ್ರಮೋತ್ಸವ ನಿರೀೆಯನ್ನು ಹೊಂದಿದ್ದ ಸ್ವಪಯರಿಗೆ ಶಾಸಕರು, ಪ್ರವಾಸ ಭಾಗ್ಯದ ಮೂಲಕ ಖುಷಿಪಡಿಸುತ್ತಿದ್ದಾರೆ.

ವಿಮಾನ ಏರಿ ಪ್ರವಾಸ
ಕಳೆದ ಮೂರ್ನಾಲ್ಕು ದಿನಗಳಿಂದಲೂ ವಿವಿಧ ಹಂತಗಳಲ್ಲಿ ಆಯಾ ವಾರ್ಡಿನ ನಾಲ್ಕೆದು ಮಂದಿ ವಿಮಾನ ಏರುತ್ತಲೇ ಇದ್ದಾರೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಗೋವಾಗೆ ಹೋಗಿ, ಅಲ್ಲಿ ಪ್ರತಿಷ್ಠಿತ ಹೋಟೆಲ್​ಗಳಲ್ಲಿ ವಾಸ್ತವ್ಯ ಹೂಡಿದ್ದು, ಅಲ್ಲಿನ ವಿವಿಧ ಸ್ಥಳಗಳಿಗೆ ಭೇಟಿ, ಬೀಚ್​ನಲ್ಲಿ ಕಾಲ ಕಳೆಯುವುದು, ಶಾಪಿಂಗ್​ ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ಖುಷಿ ಅನುಭವಿಸುತ್ತಿದ್ದಾರೆ.

ಗ್ರಾಮೀಣ ಭಾಗದವರ ನಿರೀೆ:
ಪ್ರಸ್ತುತ ನಗರದ 31 ವಾರ್ಡ್​ಗಳಲ್ಲಿನ ಸ್ವಪಯರಿಗೆ ಉಚಿತ ಪ್ರವಾಸ ಭಾಗ್ಯ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದವರಿಗೂ ಅವಕಾಶ ಕಲ್ಪಿಸುವ ನಿರೀೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ೇತ್ರದಾದ್ಯಂತ ಚರ್ಚೆಯಾಗುತ್ತಿರುವುದರ ನಡುವೆ ಹಲವರು, ತಮ್ಮನ್ನು ಕಡೆಗಣಿಸದಂತೆ ಶಾಸಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ನಿಟ್ಟಿನಲ್ಲೂ ಯೋಜನೆ ರೂಪಿಸುತ್ತಿದ್ದು, ಪ್ರವಾಸಕ್ಕೆ ತೆರಳುವವರ ಪಟ್ಟಿ ತಯಾರಾಗುತ್ತಿದೆ.


ಈಗಾಗಲೇ ಚಿಕ್ಕಬಳ್ಳಾಪುರದ ವಿವಿಧ ವಾರ್ಡ್​ಗಳಲ್ಲಿನ ಕಾಂಗ್ರೆಸ್​ ಯುವ ನಾಯಕರು ಗೋವಾ ಪ್ರವಾಸದಲ್ಲಿದ್ದಾರೆ. ಇವರನ್ನು ವಿಶೇಷ ಪ್ಯಾಕೇಜ್​ನಲ್ಲಿ ಶಾಸಕ ಪ್ರದಿಪ್​ ಈಶ್ವರ್​ ಕಳುಹಿಸಿದ್ದಾರೆ ಎಂಬುದಾಗಿ ಚರ್ಚೆಯಾಗುತ್ತಿದೆ.

ವೆಂಕಟೇಶ್​, ಸ್ಥಳಿಯ ನಿವಾಸಿ, ಚಿಕ್ಕಬಳ್ಳಾಪುರ