ಜಿಲ್ಲೆ

135 ಲೀ ಗೋವಾ ಮದ್ಯ ಜಪ್ತಿ

Belagavi

ಬೆಳಗಾವಿ: ಖಾನಾಪೂರ ತಾಲೂಕಿನ  ಜಾಂಬೋಟಿ-ಚೋರ್ಲಾ ಹೆದ್ದಾರಿಯಲ್ಲಿ  ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನದ ಮೇಲೆ ಗುರುವಾರ ಜಿಲ್ಲಾ ಪೊಲೀಸರು ದಾಳಿ ನಡೆಸಿ ಓರ್ವ ವ್ಯಕ್ತಿಯನ್ನು ಬಂಧಿಸಿ, 135 ಲೀ ಗೋವಾ ಮದ್ಯವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರ ಬೀಡ ಜಿಲ್ಲೆಯ ಪಾಟೋದ ತಾಲೂಕಿನ ನಾಳವಂಡಿ ಗ್ರಾಮದ ಗೋರಕ್ಷನಾಥ ನವನಾಥ ಪನ್ನಾಳಕರ (32), ಸುರೇಶ ಗೋರಖ ಮೋಘೆ (30) ಬಂಧಿತರು. ಕಣಕುಂಬಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗುರುವಾರ ಸುಜಕಿ ಎಸ್‌ಎಕ್ಸ್-4 ಕಾರ ನಾಲ್ಕು ಚಕ್ರ ವಾಹನದಲ್ಲಿ ಗೋಲ್ಡ್‌ನ ಏಸ್ ವಿಸ್ಕಿ 108 ಬಾಟಲಿಗಳು ಒಟ್ಟು 81.ಲೀ,  ಬ್ಲ್ಯೂ7 ವಿಸ್ಕಿ 72 ಬಾಟಲಿಗಳು ಒಟ್ಟು 54.ಲೀ ಸೇರಿದಂತೆ 135.ಲೀ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಪತ್ತೆಯಾಗಿದೆ.