ಜಿಲ್ಲೆ

ಬಿಸ್ಕಿಟ್ ಬಾಕ್ಸ್ ನಲ್ಲಿತ್ತು ಗೋವಾ ಲಿಕ್ಕರ್

Uttara Kannada - Subash Hegde

ಜೊಯಿಡಾ: ಬಿಸ್ಕಿಟ್ ಬಾಕ್ಸ್ ನಲ್ಲಿ ತುಂಬಿಕೊಂಡು ಸಾಗುತ್ತಿದ್ದ 150 ಬಾಕ್ಸ್ ಅಕ್ರಮ ಗೋವಾ ಲಿಕ್ಕರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ರಾಮನಗರದಲ್ಲಿ ಜೊಯಿಡಾ ಸಿಪಿಐ ನಿತ್ಯಾನಂದ ಪಂಡಿತ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಗೊವಾದಿಂದ ಹೈದರಾಬಾದ್ ಗೆ ಪಾರ್ಲೇಜಿ ಬಿಸ್ಕಿಟ್ ತುಂಬಿಕೊಂಡು ಹೋಗುತಿದ್ದ ಅಶೋಕ ಲೈಲೆಂಡ್ ಲಾರಿಯಲ್ಲಿ ಮದ್ಯ ಪತ್ತೆಯಾಗಿದೆ.

ತೆಲಂಗಾಣ ರಾಜ್ಯದ ನೆಲ್ಲಗೊಂಡದ ವಾಹನ ಚಾಲಕ ಕೊತ್ತಪಳ್ಳಿ ನಾಗಶಾಲಿ ಸತ್ಯನಾರಾಯಣ ಅಚಾರಿ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ವಾಹನ ಮತ್ತು ಸರಾಯಿ ಮೌಲ್ಯ ಸೇರಿ ಒಟ್ಟೂ ಸುಮಾರು ೫೦ ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ.

ಜೊಯಿಡಾ ಠಾಣೆಯ ಸಿಬ್ಬಂದಿ ಮಂಜುನಾಥ ಚೌರದ,ದರ್ಶನ ಎಸ್.ಎಚ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.