ಜಿಲ್ಲೆ

ಬಸ್ರೂರು ಮಠಕ್ಕೆ ಗೋವಾ ಸಿಎಂ ಭೇಟಿ

ಇಂದಿರಾ ಎನ್ ಕೆ

ಕುಂದಾಪುರ: ಕುಂದಾಪುರ ತಾಲೂಕಿನ ಬಸ್ರೂರು ಶ್ರೀ ಕಾಶಿ ಮಠಕ್ಕೆ ಗುರುವಾರ ಸಂಜೆ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಪಾಂಡುರಂಗರಾವ್ ಸಾವಂತ್ ಭೇಟಿ ನೀಡಿದರು.

ದೇವರ ಹಾಗೂ ದೇವಳದ ಪ್ರಾಂಗಣದಲ್ಲಿರುವ ಉಭಯ ಗುರುಗಳ ವೃಂದಾವನಗಳ ದರ್ಶನ ಪಡೆದು, ಬಾಲಕಾಶ್ರಮದ ಮಕ್ಕಳೊಂದಿಗೆ ಕುಶಲೋಪರಿ ನಡೆಸಿದರು. ಅವರನ್ನು ಮಠದ ಆಡಳಿತ ಮಂಡಳಿ ಸದಸ್ಯರು ದೇವರ ಪ್ರಸಾದ ನೀಡಿ ಗೌರವಿಸಿದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ರಂಗನಾಥ ಪಡಿಯಾರ್, ಬಿ.ಗಣೇಶ ಕಾಮತ್, ರಾಮಚಂದ್ರ ಪಡಿಯಾರ್, ದಿನಕರ ಶೆಣೈ, ಪದ್ಮನಾಭ ಶೆಣೈ ಕುಂದಾಪುರ, ದೇವಳ ಅರ್ಚಕ ಸುರೇಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು.