ಜಿಲ್ಲೆ

7ರಂದು ಗೋ ಮಹಿಮಾ

Dharwada - Basavaraj Idli

ಹುಬ್ಬಳ್ಳಿ: ಗೋ ಸೇವಾ ಗತಿವಿಧಿ ಮಹಾನಗರ ವತಿಯಿಂದ ಗೋ ಮಹಿಮಾ ಕಾರ್ಯಕ್ರಮವನ್ನು ಮೇ 7ರಂದು ಇಲ್ಲಿಯ ಗೋಕುಲ ರಸ್ತೆ ಲೂತಿಮಠ ಲೇಔಟ್ ನಲ್ಲಿರುವ ಹವ್ಯಕ ಭವನದಲ್ಲಿ ಏರ್ಪಡಿಸಲಾಗಿದೆ.

ಸಂಜೆ 5.30ಕ್ಕೆ ಭಗವಾನ್ ಗೋಪಾಲಕೃಷ್ಣ ಗೋಕಥಾ ಸಂಕೀರ್ತನೆಯನ್ನು ಶಿರಸಿಯ ನಾರಾಯಣದಾಸ ಅವರು ನಡೆಸಿಕೊಡುವರು. 6.30ಕ್ಕೆ ನಗರ ಜೀವನದಲ್ಲಿ ದೇಶಿ ಗೋವಿನ ಪಾತ್ರ ಮತ್ತು ತಾರಸಿ ತೋಟದ ಅವಶ್ಯಕತೆ ಕುರಿತು ರಾವನ್ ಅವರು ಉಪನ್ಯಾಸ ನಡೆಸಿಕೊಡುವರು.
ಶಾಸಕ ಮಹೇಶ ಟೆಂಗಿನಕಾಯಿ ಕಾರ್ಯಕ್ರಮ ಉದ್ಘಾಟಿಸುವರು.

ಇದಕ್ಕೂ ಮೊದಲು ಸಂಜೆ 4.45ಕ್ಕೆ ಶ್ರೀ ವಿಷ್ಣು ಸಹಸ್ರನಾಮ ಸಾಮೂಹಿಕ ಪಾರಾಯಣ ನಡೆಯಲಿದೆ ಎಂದು ಕಾರ್ಯಕ್ರಮ ಸಮಿತಿ ಅಧ್ಯಕ್ಷ ಭರತ ಭೇರುಲಾಲ ಜೈನ್ ತಿಳಿಸಿದ್ದಾರೆ.