ಜಿಲ್ಲೆ

ಗೋಪಾಲನೆಗಾಗಿ ವಾರ್ಷಿಕ ಕೋಟಿ ರೂ.ಖರ್ಚು : ವಾಸುದೇವ ಆಸ್ರಣ್ಣ ಮಾಹಿತಿ

ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಳವು ವಾರ್ಷಿಕ ಸುಮಾರು ಒಂದು ಕೋಟಿ ರೂಪಾಯಿಗಳನ್ನು ಗೋಶಾಲೆಗಾಗಿ ಖರ್ಚು ಮಾಡುತ್ತಿದೆ ಎಂದು ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ನಂದಿನಿ ಗೋಶಾಲೆಯಲ್ಲಿ ಆಯೋಜಿಸಲಾದ ಗೋಪೂಜೆಯಲ್ಲಿ ಮಾತನಾಡಿದರು.

ಜಿಲ್ಲಾ ಧಾರ್ಮಿಕ ದತ್ತಿ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಪ್ರಸಾದ್ ಶಿಬರೂರು, ಮೂಲ್ಕಿಯ ಬಿಜೆಪಿ ಮುಖಂಡ ಸುನೀಲ್ ಆಳ್ವ ಮಾತನಾಡಿದರು. ಅರ್ಚಕ ಗೋಪಾಲಕೃಷ್ಣ ಆಸ್ರಣ್ಣ ಗೋಪೂಜೆ ನಡೆಸಿದರು. ಗೋಶಾಲೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ಗೌರವಿಸಲಾಯಿತು.

ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕೊಡೆತ್ತೂರುಗುತ್ತು ಕಿಶೋರ್ ಶೆಟ್ಟಿ, ವೇದವ್ಯಾಸ ಉಡುಪ, ಕೊಡೆತ್ತೂರುಗುತ್ತು ಗುತ್ತಿನಾರ್ ನಿತಿನ್ ಶೆಟ್ಟಿ, ಗೋಸೇವಕ ಸುಮನ್ ಶೆಟ್ಟಿ, ಈಶ್ವರ ಕಟೀಲ್, ಅಭಿಲಾಷ್ ಶೆಟ್ಟಿ, ದೇವದಾಸ ಮಲ್ಯ, ನಿಶಾಂತ್ ಶೆಟ್ಟಿ, ಲೋಕಯ್ಯ ಸಾಲ್ಯಾನ್, ತಿಮ್ಮಪ್ಪ ಕೋಟ್ಯಾನ್, ಸ್ವರಾಜ್ ಶೆಟ್ಟಿ, ಪುಷ್ಪರಾಜ ಚೌಟ, ದಾಮೋದರ ಶೆಟ್ಟಿ, ಸತೀಶ್ ಶೆಟ್ಟಿ ಎಕ್ಕಾರು, ಜ್ಯೋತಿ ಉಡುಪ, ಪ್ರಕಾಶ ಆಚಾರ್, ಸ್ಟಾೃನಿ ಪಿಂಟೋ, ಯತೀಶ್ ಶೆಟ್ಟಿ, ತಾರಾನಾಥ ಶೆಟ್ಟಿ, ಗೋಶಾಲೆಯ ಸದಾನಂದ ಮತ್ತಿತರರಿದ್ದರು. ಗೋವುಗಳಿಗೆ ದೋಸೆ, ಪಂಚಕಜ್ಜಾಯ, ಹಣ್ಣು, ಹಿಂಡಿ ನೀಡಲಾಯಿತು.