ಜಿಲ್ಲೆ

ಗೋ ಕುಟೀರ ಭೂಮಿ ಪೂಜೆಗೆ ಗೋ ಸಂಕಲ್ಪ

ಕಾಸರಗೋಡು: ಕನ್ನಡ ಗ್ರಾಮದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮದಿನೋತ್ಸವ, ಅಭಿನಂದನಾ ಕಾರ್ಯಕ್ರಮ ಅಂಗವಾಗಿ ಕನ್ನಡ ಗ್ರಾಮದಲ್ಲಿ ಗೋ ಕುಟೀರ ನಿರ್ಮಾಣಕ್ಕಿರುವ ಜಾಗದಲ್ಲಿ ಗೋ ಸಂಕಲ್ಪ ನಡೆಸಲಾಯಿತು.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಗೋ ಕುಟೀರದ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಾಸರಗೋಡು ನಗರಸಭೆಯ ಕೌನ್ಸಿಲರ್ ಶಾರದಾ ಬಿ. ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಜಯಾನಂದ ಕುಮಾರ್ ಹೊಸದುರ್ಗ, ಕೆ.ಗುರುಪ್ರಸಾದ ಕೋಟೆಕಣೆ, ಶ್ರೀಕಾಂತ ಕಾಸರಗೋಡು, ಕೆ.ಮುರಳೀಧರ ಪಾರೆಕಟ್ಟೆ, ಕೆ.ನಿರಂಜನ ಕೊರಕ್ಕೋಡು, ಯೋಗೀಶ್ ಕೋಟೆಕಣೆ, ನಾರಾಯಣ ನಾಯ್ಕ ಪೆರ್ನೆ, ಕಿಶೋರ್ ಕುಮಾರ್ ಕೆ., ಕುಶಲ ಕುಮಾರ ಕೆ., ರಾಧಾ ಶಿವರಾಮ, ಸವಿತಾ ಕಿಶೋರ್ ಕುಮಾರ್, ಕೆ.ಜಗದೀಶ ಕೂಡ್ಲು, ಶ್ವೇತಾ ಯೋಗೀಶ್ ಕೋಟೆಕಣಿ ಉಪಸ್ಥಿತರಿದ್ದರು.