ರಾಮಪುರದ ಜ್ಞಾನದೀಪೋತ್ಸವ ಸಮಾರಂಭವನ್ನು ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಉದ್ಘಾಟಿಸಿದರು. ಡಾ. ಮಂಜುನಾಥ ಬೆನ್ನೂರ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎಂ. ಕೋಲೂರ, ಶಿಕ್ಷಣ ಸಂಯೋಜಕ ಎಂ.ಎಸ್. ಚವ್ಹಾಣ ಇತರರಿದ್ದರು. 
ಜಿಲ್ಲೆ

ಜ್ಞಾನದೀಪೋತ್ಸವ ಜ್ಞಾನದ ಸುಪ್ರಭೆ ಹರಡಲಿ

Vijayapura - Desk - Gurappa Lokuri

ರಬಕವಿ/ಬನಹಟ್ಟಿ: ವಿದ್ಯಾರ್ಥಿಗಳು ನೆಮ್ಮದಿ ಬದುಕು ಸಾಗಿಸಲು ಸಂಸ್ಕಾರ, ನಡತೆಗಳು ಬಹುಮುಖ್ಯವಾಗಿದೆ ಎಂಬುದನ್ನು ಅರಿತು ಜ್ಞಾನ - ವಿಜ್ಞಾನಗಳನ್ನು ಅಭ್ಯಸಿಸಬೇಕೆಂದು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.

ರಾಂಪುರದ ಜ್ಞಾನೋದಯ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಜ್ಞಾನದೀಪೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ವಿಶ್ವದ ಎಲ್ಲ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. ಅವುಗಳಿಗೆ ಸ್ಪರ್ಧೆಯೊಡ್ಡುವ ಮೂಲಕ ಭಾರತೀಯರು ಎಲ್ಲಡೆ ಸ್ಥಾನ ಪಡೆದಿದ್ದಾರೆ. ಮುಂದಿನ ದಿನಗಳಲ್ಲೂ ನಮ್ಮ ಸಾಧನೆ ಇದೇ ತೆರನಾಗಿ ಮುಂದುವರಿಯಬೇಕೆಂದರು.

ಡಾ. ಮಂಜುನಾಥ ಬೆನ್ನೂರ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎಂ. ಕೋಲೂರ, ಶಿಕ್ಷಣ ಸಂಯೋಜಕ ಎಂ.ಎಸ್. ಚವ್ಹಾಣ, ಸಿಆರ್‌ಪಿ ಎಸ್.ಎಸ್. ಬಡ್ಡಿ ಮಾತನಾಡಿದರು.

ಜ್ಞಾನದೀಪ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಾಚಾರ್ಯ ಮಲ್ಲಿಕಾರ್ಜುನ ಮನ್ಮಿ ಸ್ವಾಗತಿಸಿದರು. ಎಸ್.ಬಿ. ಕಾರ್ವೇಕರ, ಕೆ.ಎಸ್.ಬೆಳಗಲಿ ನಿರೂಪಿಸಿದರು.

ಸಂಸ್ಥೆ ಅಧ್ಯಕ್ಷ ಬಾಲಚಂದ್ರ ಹೊಸಕೋಟಿ, ಪರಪ್ಪ ಬಿಳ್ಳೂರ, ಶಂಕರಣ್ಣ ಅಮ್ಮಲಜೇರಿ, ಎಸ್.ಎಸ್. ಜಡಿ, ವಿವೇಕಾನಂದ ಭಸ್ಮೆ, ಚಂದ್ರಕಾಂತ ತೆಳಗಿನಮನಿ, ಬಿ.ಎಂ. ಬರಗಿ, ಎಸ್.ಕೆ. ಗೊಲಭಾಂವಿ ಇತರರಿದ್ದರು.