ಜ್ಞಾನದೀಪ ಕಾರ್ಯಕ್ರಮದಡಿ ನಿಯೋಜಿಸಿದ ಶಿಕ್ಷಕರಿಗೆ ಭಾನುವಾರ ಆದೇಶ ಪತ್ರ ವಿತರಿಸಲಾಯಿತು. 
ಜಿಲ್ಲೆ

ಜ್ಞಾನದೀಪ ಯೋಜನೆಯಡಿ ಶಿಕ್ಷಕರ ನಿಯೋಜನೆ

ನರೇಶ್ ಕುಮಾರ್

ಕಂಪ್ಲಿ: ಇಲ್ಲಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಜ್ಞಾನದೀಪ ಕಾರ್ಯಕ್ರಮದಡಿ ತಾಲೂಕಿನ ಎಮ್ಮಿಗನೂರು (ಬಸವನಪೇಟೆ), ಬ್ರಾಹ್ಮಣರಕ್ಯಾಂಪ್, ಸೋಮಲಾಪುರ, ಸುಗ್ಗೇನಹಳ್ಳಿ ಮತ್ತು ಏಳುಬೆಂಚಿ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ತಲಾ ಒಬ್ಬರಂತೆ ನಿಯೋಜಿಸಿದ ಶಿಕ್ಷಕರಿಗೆ ಭಾನುವಾರ ಆದೇಶ ಪತ್ರ ವಿತರಿಸಲಾಯಿತು.

ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಮಾತನಾಡಿ, ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಶಿಕ್ಷಕರಿಲ್ಲದ ಐದು ಸರ್ಕಾರಿ ಶಾಲೆಗೆ ತಲಾ ಒಬ್ಬರಿಗೆ ಮಾಸಿಕ 8 ಸಾವಿರ ರೂ.ಯಂತೆ ಹತ್ತು ತಿಂಗಳ ಬೋಧನೆಗೆ ಐವರು ಶಿಕ್ಷಕರನ್ನು ನಿಯೋಜಿಸಿದೆ.

ಟ್ರಸ್ಟ್ ಯೋಜನೆಯ ಸದಸ್ಯತ್ವ ಹೊಂದಿರುವ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಪಡೆಯಲು ಸುಜ್ಞಾನ ನಿಧಿ ಶಿಷ್ಯವೇತನ ಕಾರ್ಯಕ್ರಮ ಜಾರಿಗೊಳಿಸಿದೆ ಎಂದರು. ತಾಲೂಕು ಯೋಜನಾಧಿಕಾರಿ ಎಂ.ಎ.ಹಾಲಪ್ಪ ಮಾತನಾಡಿದರು.

ನಿಯೋಜನೆಗೊಂಡ ಶಿಕ್ಷಕರಾದ ನಟರಾಜ, ಮುದುಕಪ್ಪ ಕರೂರು, ಎಚ್.ಪಿ.ರೇಣುಕಮ್ಮ, ಹುಲುಗಪ್ಪ, ಯೋಜನಾಧಿಕಾರಿಗಳಾದ ನಾಗೇಶ್ ಇತರರಿದ್ದರು.