ವಿಶ್ವ ವಿನಾಯಕ, ಸೃಜನ್ ಹಿರೇಮಠ್, ನಿಖಿಲ್, ಪನ್ನಗ, ಪ್ರಥಮೇಶ್, ಶಾನ್ವಿ ಶೆಟ್ಟಿ, ದಿಶಾ ಎಂ.ಸಿ., ನೇಹಾ ಎಂ.ಆರ್., ಕಾಜೊಲ್ ಎಂ ಪಾಟೀಲ್, ಸೋನಿ ಎಂ.  
ಜಿಲ್ಲೆ

ಜ್ಞಾನಸುಧಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಇಂದಿರಾ ಎನ್ ಕೆ

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ ಹಾಗೂ ನ್ಯಾಷನಲ್ ಪದವಿ ಪೂರ್ವ ಕಾಲೇಜು ಬಾರ್ಕೂರು ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಜಂಪ್ ರೋಪ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿಶ್ವ ವಿನಾಯಕ, ಸೃಜನ್ ಹಿರೇಮಠ್, ಪ್ರಥಮ ವಿಜ್ಞಾನ ವಿಭಾಗದ ನಿಖಿಲ್, ಶಾನ್ವಿ ಶೆಟ್ಟಿ ಹಾಗೂ ಪನ್ನಗ, ಪ್ರಥಮೇಶ್ ರಿಲೇ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದ ರಿಲೇ ತಂಡ ಪ್ರಥಮ ಸ್ಥಾನ ಗಳಿಸಿದೆ. ತಂಡದಲ್ಲಿ ದಿಶಾ ಎಂ.ಸಿ., ನೇಹಾ ಎಂ.ಆರ್., ಕಾಜೊಲ್ ಎಂ.ಪಾಟೀಲ್, ಸೋನಿ ಎಂ. ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರನ್ನು ಸಂಸ್ಥೆ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ.ಕೊಡವೂರು ಅಭಿನಂದಿಸಿದ್ದಾರೆ.