ಕೊಲ್ಹಾರ: ತಾಲೂಕಿನ ಕೂಡಗಿ ಗ್ರಾಮದ ಜ್ಞಾನ ಭಾರತಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಲಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಾಧನೆ ಮೆರೆದಿದ್ದಾರೆ.
ಬಾಲಕೀಯರು ಹಾಗೂ ಬಾಲಕರ ವಿಭಾಗದ ವ್ಹಾಲಿಬಾಲ್ ಕ್ರೀಡೆ ಹಾಗೂ ಚಕ್ರ ಎಸೆತ, ಗುಂಡು ಎಸೆತ ವೈಯಕ್ತಿಕ ಆಟೋಟಗಳಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಸೋಮು ಸಾಗರ, ತರಬೇತುದಾರ ಸುರೇಶ ಜಾಧವ, ಗ್ರಾಮದ ಪ್ರಮುಖರಾದ ಶಫೀಕ ಕೊಲ್ಹಾರ, ದಸ್ತಗೀರಸಾಬ ಮೋಪಗಾರ, ಶಾಸಪ್ಪ ಮಾದರ, ಮುಖ್ಯ ಗುರುಮಾತೆ ಸೀಮಾ ಹರಿಕಾಂತ, ಜಗದೀಶ ಸಾಲಳ್ಳಿ, ಶಿಕ್ಷಕ ಯಂಡಿಗೇರಿ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಸಂಭ್ರಮಾಚರಿಸಲಾಯಿತು.